Thursday, December 19, 2024

BMTC ಬಸ್‍ನಲ್ಲಿ ಜಡೆ ಜಗಳ : ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು

ಬೆಂಗಳೂರು: ಬಸ್‍ನ ಕಿಟಕಿ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದು, ಒಬ್ಬರಿಗೊಬ್ಬರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೆಜೆಸ್ಟಿಕ್‍ನಿಂದ ಪೀಣ್ಯಕ್ಕೆ ಹೊರಟಿದ್ದ ಕೆಎ 57 ಎಫ್ 4255 ನಂಬರ್‌ನ ಬಿಎಂಟಿಸಿ ಬಸ್‍ನಲ್ಲಿ ಈ ಘಟನೆ ನಡೆದಿದೆ. ಮುಂದಿನ ಸೀಟ್‍ನಲ್ಲಿ ಕುಳಿತಿದ್ದ ಮಹಿಳೆ ಹಾಗೂ ಹಿಂದಿನ ಸೀಟ್‍ನಲ್ಲಿ ಕುಳಿತ ಮಹಿಳೆಯ ನಡುವೆ ಬಸ್‍ನ ಕಿಟಕಿ ವಿಚಾರಕ್ಕೆ ಗಲಾಟೆ ನಡೆದಿದೆ.

ಇದನ್ನೂ ಓದಿ: ಮೊದಲ ಜನಸ್ಪಂದನದಲ್ಲಿ ಶೇ. 98 ರಷ್ಟು ಅರ್ಜಿ ವಿಲೇವಾರಿ: ಸಿಎಂ ಸಿದ್ದರಾಮಯ್ಯ

ಜಗಳ ತಾರಕಕ್ಕೇರಿ ಮುಂದೆ ಕುಳಿತಿದ್ದ ಮಹಿಳೆಯು ಏಕಾಏಕಿಯಾಗಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ. ಬಳಿಕ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಬಸ್‍ನಲ್ಲಿದ್ದ ಜನ ಮುಂದಿನ ಸೀಟ್‍ನಲ್ಲಿದ್ದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಗಲಾಟೆಯ ವೀಡಿಯೋ ಬಸ್‍ನಲ್ಲಿದ್ದ ಸಹ ಪ್ರಯಾಣಿಕರ ಮೊಬೈಲ್‍ನಲ್ಲಿ ಸೆರೆಯಾಗಿದೆ.

 

RELATED ARTICLES

Related Articles

TRENDING ARTICLES