Sunday, January 5, 2025

ಡಿ.ಕೆ ಸುರೇಶ್​ರನ್ನು ಗುಂಡಿಕ್ಕಿ ಕೊಲ್ಲಬೇಕು : ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ದಾವಣಗೆರೆ : ದೇಶ ವಿಭಜನೆ ಹೇಳಿಕೆ ಹರಿಬಿಟ್ಟಿದ್ದ ಸಂಸದ ಡಿ.ಕೆ. ಸುರೇಶ್ ಹಾಗೂ ಅದಕ್ಕೆ ಪುಷ್ಠಿ ನೀಡುವಂತೆ ನಾಲಗೆ ಹರಿಬಿಟ್ಟಿದ್ದ ವಿನಯ್ ಕುಲಕರ್ಣಿ ವಿರುದ್ಧ ಮಾಜಿ ಡಿಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಕೆರಳಿ ಕೆಂಡವಾಗಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿರುವ ಅವರು, ಸಂಸದ ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ ಇಬ್ಬರು ರಾಷ್ಟ್ರದ್ರೋಹಿಗಳು. ದೇಶ ವಿಭಜನೆ ಮಾತು ಹೇಳುವ ಡಿ.ಕೆ ಸುರೇಶ್, ವಿನಯ್ ಕುಲಕರ್ಣಿ ಅವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಕಿಡಿಕಾರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು. ಅವರು ಉತ್ತರಕ್ಕೋ ದಕ್ಷಿಣಕ್ಕೋ..? ಅಖಂಡ ಭಾರತದ ಮಾತು ಭಾಷಣ ಮಾಡ್ತಿರಿ. ಮಲ್ಲಿಕಾರ್ಜುನ ಖರ್ಗೆ ನಿಮಗೆ ತಾಕತ್ತು ಇದ್ದರೆ, ಆ ಇಬ್ಬರನ್ನೂ ಪಕ್ಷದಿಂದ ಕಿತ್ತಾಕಿ ಎಂದು ಕಾಂಗ್ರೆಸ್ಸಿಗರ ವಿರುದ್ಧ ಗುಡುಗಿದ್ದಾರೆ.

ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ

ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇವೆ. ದೇಶ ಛಿದ್ರ ಮಾಡುವವರಿಗೆ, ಇಂತವರಿಗೆ ತಕ್ಕ ಪಾಠ ಕಲಿಸಿ. ದೇಶ ವಿಭಜನೆ ಮಾತು ಆಡುವವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ. ದೇಶ ತುಂಡು ಮಾಡುವ ಮಾತು ನೆಹರು ಕಾಲದಿಂದಲೂ ಬಂದಿದೆ. ಜಿನ್ನಾ ಸಂಸ್ಕೃತಿ ಡಿ.ಕೆ ಸುರೇಶ್ ಅವರಿಗೆ ಬಂದಿದೆ ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸದಿದ್ದಾರೆ.

RELATED ARTICLES

Related Articles

TRENDING ARTICLES