Friday, November 22, 2024

ಸಂಪತ್ತು ಲೂಟಿಗೆ 30 ಕೊಟ್ಯಾಧಿಪತಿಗಳು ಬಂದಿದ್ದಾರೆ : ರಾಹುಲ್ ಗಾಂಧಿ

ಒಡಿಶಾ : ಒಡಿಶಾ ರಾಜ್ಯದ ಸಂಪತ್ತು ಲೂಟಿ ಮಾಡುವುದಕ್ಕಾಗಿ 30 ಜನ ಕೋಟ್ಯಾಧಿಪತಿಗಳು ಇಲ್ಲಿಗೆ ಬಂದಿದ್ದಾರೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

ಭಾರತ್ ಜೋಡೋ ನ್ಯಾಯ ಯಾತ್ರೆ ಒಡಿಶಾ ಪ್ರವೇಶಿಸಿದ್ದು, ರೂರ್​ ಕೆಲಾದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು.

ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿವೆ. ಒಡಿಶಾದಲ್ಲಿ ಬುಡಕಟ್ಟು ಸಮುದಾಯದವರ ಜನಸಂಖ್ಯೆ ದೊಡ್ಡದಿದೆ. ಆದರೆ, ಬುಡಕಟ್ಟು ಜನರು ಹಾಗೂ ದಲಿತರನ್ನು ರಾಜ್ಯ ಸರ್ಕಾ ರ ಸತತವಾಗಿ ನಿರ್ಲಕ್ಷಿಸುತ್ತಾ ಬಂದಿದೆ. ಒಡಿಶಾ ರಾಜ್ಯದ ಜನರ ಹಿತಾಸಕ್ತಿ ಕಾಪಾಡುವುದಕ್ಕಾಗಿಯೇ ಕಾಂಗ್ರೆಸ್ ಈ ಎರಡು ಪಕ್ಷಗಳನ್ನು ವಿರೋಧಿಸುತ್ತಿದೆ ಎಂದು ಹೇಳಿದರು.

30 ಲಕ್ಷ ಜನರು ಇತರ ರಾಜ್ಯಕ್ಕೆ ವಲಸೆ

ರಾಜ್ಯ ಸರ್ಕಾರ ಬಡ ಜನರಿಗಾಗಿ ಯಾವ ಕಾರ್ಯ ಕ್ರಮಗಳನ್ನು ರೂಪಿಸಿಲ್ಲ. ಹೀಗಾಗಿ, ಅಂದಾಜು 30 ಲಕ್ಷ ಜನರು ಉದ್ಯೋಗ ಅರಸಿ ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಇನ್ನೊಂದೆಡೆ, ರಾಜ್ಯದ ಸಂಪತ್ತು ಲೂಟಿ ಮಾಡುವುದಕ್ಕಾಗಿ 30 ಜನ ಕೋಟ್ಯಾಧಿಪತಿಗಳು ಇಲ್ಲಿಗೆ ಬಂದಿದ್ದಾರೆ ಎಂದು ಕುಟುಕಿದರು.

ಕಾಂಗ್ರೆಸ್ ನಾಯಕರ ಮಾತಿಗೆ ಅಡ್ಡಿ

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಪ್ರಧಾನಿ ನರೇಂದ್ರ ಮೋ ದಿ ಪಾಲುದಾರಿಕೆಯಲ್ಲಿ ಒಡಿಶಾ ಸರ್ಕಾರ ನಡೆಸುತ್ತಿದ್ದಾರೆ. ಸಂಸತ್​ನಲ್ಲಿ ಬಿಜೆಡಿ ಸಂಸದರು ಬಿಜೆಪಿಗೆ ಬೆಂಬಲ ನೀಡುತ್ತಾರೆ. ಅದೇ ರೀತಿ, ಬಿಜೆಪಿ ಆಣತಿಯಂತೆ ಬಿಜೆಪಿಯವರು ಕಾಂಗ್ರೆಸ್ ನಾಯಕರ ಮಾತಿಗೆ ಅಡ್ಡಿಯನ್ನುಂಟು ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

RELATED ARTICLES

Related Articles

TRENDING ARTICLES