Monday, December 23, 2024

ದೇವ್ರಿ ದರ್ಶನ ಬಳಿಕ ಐಪಿಎಲ್​ಗೆ ಅಭ್ಯಾಸ ಆರಂಭಿಸಿದ ಧೋನಿ

ಬೆಂಗಳೂರು : ಚೆನ್ನೈ ಸೂಪರ್​ ಕಿಂಗ್ಸ್ ತಂಡದ​ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್​-2024ಗಾಗಿ ಅಭ್ಯಾಸ ಆರಂಭಿಸಿದ್ದಾರೆ.

ಧೋನಿ ಅವರು ರಾಂಚಿಯಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಲ್ಲದೆ, ನಿನ್ನೆ ರಾಂಚಿಯ ದೇವ್ರಿ ದೇವಸ್ಥಾನಕ್ಕೆ ಧೋನಿ ಅವರು ಭೇಟಿ ನೀಡಿದ್ದರು. ಕೂಲ್ ಕ್ಯಾಪ್ಟನ್ ಧೋನಿ ಯಾವುದೇ ಪ್ರಮುಖ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿ, ಆಶೀರ್ವಾದ ಪಡೆಯುತ್ತಾರೆ ಎನ್ನುವುದು ವಿಶೇಷ.

ಚೆನ್ನೈ ಸಂಭಾವ್ಯ ಪ್ಲೇಯಿಂಗ್ XI

ಎಂ.ಎಸ್ ಧೋನಿ (ನಾಯಕ/ವಿ.ಕೀ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಡೇರಿಲ್ ಮಿಚೆಲ್, ಅಜಿಂಕ್ಯ ರಹಾನೆ, ರಚಿನ್ ರವೀಂದ್ರ / ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮತೀಶ ಪತಿರಾನಾ / ಮುಸ್ತಫಿಜುರ್ ರೆಹಮಾನ್

RELATED ARTICLES

Related Articles

TRENDING ARTICLES