Wednesday, January 22, 2025

ವಿಶ್ವದ ನಂ.1 ಟೆಸ್ಟ್ ಬೌಲರ್ ಪಟ್ಟ ಅಲಂಕರಿಸಿದ ಜಸ್ಪ್ರೀತ್ ಬುಮ್ರಾ

ಬೆಂಗಳೂರು : ಭಾರತದ ವೇಗದ ಬೌಲರ್ ಜಸ್ಪ್ರೀತ್​ ಬುಮ್ರಾ ವಿಶ್ವ ಟೆಸ್ಟ್ ಕ್ರಿಕೆಟ್​ನ ನಂಬರ್ 1 ಬೌಲರ್​ ಆಗಿ ಹೊರಹೊಮ್ಮಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ 9 ವಿಕೆಟ್ ಕಬಳಿಸುವ ಮೂಲಕ 881 ಅಂಕಗಳೊಂದಿಗೆ ರ್‍ಯಾಂಕಿಂಗ್​ನಲ್ಲಿ ನಂ.1 ಪಟ್ಟಕ್ಕೇರಿಸಿದ್ದಾರೆ.

ಅಲ್ಲದೆ, ನಂ.1 ಸ್ಥಾನಕ್ಕೆ ಏರಿದ ಭಾರತದ ಮೊದಲ ವೇಗದ ಬೌಲರ್​ ಹಾಗೂ 4ನೇ ಆಟಗಾರ ಎಂಬ ಶ್ರೇಯಕ್ಕೆ ಬುಮ್ರಾ ​ಪಾತ್ರರಾಗಿದ್ದಾರೆ. ಈ ಹಿಂದೆ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಬಿಶನ್ ಬೇಡಿ ಈ ಸಾಧನೆ ಮಾಡಿದ್ದರು. ರ್‍ಯಾಂಕಿಂಗ್​ನಲ್ಲಿ ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಡೇಜಾ 6ನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ಐಸಿಸಿ ಟೆಸ್ಟ್ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಜಸ್​ಪ್ರೀತ್ ಬುಮ್ರಾ (881 ಅಂಕಗಳು) ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾದ ಕಗಿಸೊ ರಬಾಡ (851 ಅಂಕಗಳು) ದ್ವಿತೀಯ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (841 ಅಂಕಗಳು) ತೃತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವೇಗಿಗಳಾದ ಪ್ಯಾಟ್ ಕಮಿನ್ಸ್ (828 ಅಂಕಗಳು) ಹಾಗೂ ಜೋಶ್ ಹ್ಯಾಜಲ್​ವುಡ್ (818 ಅಂಕಗಳು) ಕ್ರಮವಾಗಿ 4ನೇ ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.

RELATED ARTICLES

Related Articles

TRENDING ARTICLES