Sunday, November 24, 2024

ಬಿಜೆಪಿ ನಾಯಕರು ಮೋದಿ ಮುಂದೆ ಕೋಲೆ ಬಸವ : ಸಿಎಂ ಸಿದ್ದರಾಮಯ್ಯ ಲೇವಡಿ

ನವದೆಹಲಿ: ಅನುದಾನದ ತಾರತಮ್ಯ ಆರೋಪಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಕಾಂಗ್ರೆಸ್ ನಾಯಕರು ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕರನ್ನು ಕೋಲೆ ಬಸವನಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.

ಪ್ರತಿಭಟನೆಯಲ್ಲಿ ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, GST ಹಾಗೂ ಕೇಂದ್ರ ಬಜೆಟ್‌ನ ಅಂಕಿ-ಅಂಶಗಳನ್ನು ಪ್ರಸ್ತಾಪ ಮಾಡಿದರು. ಈಗ ಬಜೆಟ್ ಗಾತ್ರ 45 ಲಕ್ಷ ಕೋಟಿ ರೂಪಾಯಿ ಇದೆ. ಈಗ ಹಿಂದೆಂದಿಗಿಂತಲೂ ಬಜೆಟ್ ಗಾತ್ರ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದಾರೆ. GSTಯಲ್ಲಿ ಎಷ್ಟು ನಷ್ಟವಾಗಲಿದೆ ಅಷ್ಟನ್ನು ಭರಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದರೆ ರಾಮನಿಗೆ ಮತ ನೀಡಿದಂತೆ: ಮಾಜಿ ಸ್ಪೀಕರ್​ ಕಾಗೇರಿ 

ಜಿಎಸ್‌ಟಿಯಲ್ಲಿ ನಮಗೆ ಅನ್ಯಾಯವಾಗಿಲ್ವಾ. ಜಿಎಸ್‌ಟಿಯಲ್ಲಿ ನಷ್ಟವಾದರೂ ತೆರಿಗೆಯಲ್ಲಿ ಹೆಚ್ಚಾಗಲಿದೆ ಅಂತ ಹೇಳಿದರು. ಅದು ಸುಳ್ಳು, ನಮಗೆ ನಷ್ಟವಾಗಿದೆ. ಇದನ್ನ ಪ್ರತಿಭಟಿಸಬೇಕಾ ಬೇಡವಾ? ಕರ್ನಾಟಕದ ಹೋರಾಟಕ್ಕೆ ಮಿಸ್ಟರ್ ಬಿಜೆಪಿ ನಾಯಕರು ಬರಬೇಕಿತ್ತು.

ಬನ್ನಿ ಅಂತಾ ಕರೆದಿದ್ದೆವು ಬಂದಿಲ್ಲ. ನಿಮಗೆ ಕೋಲೆ ಬಸವ ಗೊತ್ತಲ್ಲ. ತಲೆ ಎತ್ತಿ ಕುಣಿಸೋದು, ಇಲ್ಲದಿದ್ದರೆ ತಲೆ ಬಗ್ಗಿಸೋದು. ಬಿಜೆಪಿಯವರು ಈ ರೀತಿ ನಡೆದುಕೊಳ್ತಿದ್ದಾರೆ. ಬಿಜೆಪಿ ನಾಯಕರು ಎಂದೂ ಕೂಡ ಮೋದಿ ಸರ್ಕಾರದ ಮುಂದೆ ಧ್ವನಿ ಎತ್ತಲೇ ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

 

RELATED ARTICLES

Related Articles

TRENDING ARTICLES