ನವದೆಹಲಿ : ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ, ಜನರ ದಾರಿ ತಪ್ಪಿಸುವ ಕೆಲಸ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಕಲಿ ಕಾಂಗ್ರೆಸ್. ಒರಿಜಿನಲ್ ಕಾಂಗ್ರೆಸ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಆತ್ಮ ಒದ್ದಾಡ್ತಾ ಇರಬೇಕು. ಕುಣಿಯಲು ಆಗದೇ ಇರುವವನಿಗೆ ನೆಲ ಡೊಂಕು ಅಂತ ಹೇಳ್ತಾರೆ. ಬಾಲಕೃಷ್ಣ ಹೇಳಿಕೆ, ಅವರ ಸಂಸ್ಕೃತಿ ಇದು ಎಂದು ಕಿಡಿಕಾರಿದರು.
ಕರ್ನಾಟಕದ ಸಿಎಂ, ಡಿಸಿಎಂ, ಮಂತ್ರಿಗಳು ನಾಳೆ ಧರಣಿ ಮಾಡ್ತೇವೆ ಅಂತ ಹೇಳಿದ್ದಾರೆ. ಅವರಿಗೆ ಹೇಳಲು ಬಯಸುತ್ತೇನೆ. ಕುಣಿಯಲು ಆಗದವರಿಗೆ ನೆಲಡೊಂಕು ಅಂತ ಬಸವರಾಜ ರಾಯೆರಡ್ಡಿ ಹೇಳಿದ್ದಾರೆ. ಸಿಎಂ ಅವರ ಸಲಹೆಗಾರರು ಆಗಿದ್ದಾರೆ. ಕೆಲವು ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡುವುದಿದ್ರೆ ಕೊಡಿ ಅಂತ ಕೇಳ್ತಾರೆ. ಕಾರಣ ರಾಜ್ಯ ಯಾವುದೇ ಅನುದಾನ ಕೊಡುತ್ತಿಲ್ಲ ಅಂತ ಕಾಂಗ್ರೆಸ್ ಶಾಸಕರ ಆರೋಪ ಎಂದು ಚಾಟಿ ಬೀಸಿದರು.
ಗ್ಯಾರಂಟಿ ಡೈವರ್ಟ್ ಮಾಡಲು ಧರಣಿ
ಸಾವಿರಾರು ಕಾನೂನಿಂದ ದೇಶ ನಡೆಯಲಿಲ್ಲ. ಕೆಲವು ರೂಲ್ ಮೂಲಕ ಯೋಜನೆ ನಡೆಸಬೇಕಾಗುತ್ತದೆ. ಅದನ್ನು ನಾವು ಕೊವಿಡ್ ಸಮಯದಲ್ಲಿ ಇಂಪ್ಲಿಮೆಂಟ್ ಮಾಡಿದ್ದೇವೆ. ಬಸ್ ಫ್ರೀ ಅಂತ ಹೇಳಿದ ಸರ್ಕಾರ, ಉತ್ತರ ಕರ್ನಾಟಕದಲ್ಲಿ ಬಸ್ ಕಡಿಮೆ ಆಗಿವೆ. ಸ್ಕಾಲರ್ಶಿಪ್ ಬಗ್ಗೆ ಹೇಳಿದ್ರು, ಆದ್ರೆ ಅದು ಯಾರಿಗೂ ಸಿಕ್ಕಿಲ್ಲ. ಈ ಗ್ಯಾರಂಟಿ ಡೈವರ್ಟ್ ಮಾಡುವ ಉದ್ದೇಶದಿಂದ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಹೇಳಿದರು.
ಅತ್ಯಂತ ದುರ್ಬುದ್ದಿಯ ಪಾಲಿಟಿಕ್ಸ್
ರೈಲ್ವೆಯಲ್ಲಿ 10 ಪಟ್ಟು ಹಚ್ಚುವರಿ ಅನುದಾನ ನೀಡಿದ್ದೇವೆ. ಸಾರಿಗೆ ಇಲಾಖೆಯಲ್ಲಿಯೂ ಕೂಡ 10 ಪಟ್ಟು ಹೆಚ್ಚು ಹಣ ನೀಡಿದ್ದೇವೆ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಲ್ಲ. ಅದೇ ಅಧಿಕಾರದಲ್ಲಿಲ್ಲದಾಗ ಜಾಗರೂಕತೆಯಿಂದ ನಡೆದುಕೊಳ್ತಾರೆ. ಇದು ಸಿದ್ದರಾಮಯ್ಯನವರ ಗುಣವಾಗಿದೆ. ಎಸ್ಡಿಆರ್ಎಫ್ ಹಣದಲ್ಲಿ 70% ಹಣವನ್ನು ಮೊದಲೇ ಸರ್ಕಾರಕ್ಕೆ ನೀಡಲಾಗಿದೆ. ಅತ್ಯಂತ ದುರ್ಬುದ್ದಿಯ ಪಾಲಿಟಿಕ್ಸ್. ಅವರು ಸರಿಯಾಗಿ ನಡೆದುಕೊಂಡಿದ್ರೆ ಕುಳಿತುಕೊಂಡು ಮಾತನಾಡಬಹುದಿತ್ತು ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.