Wednesday, January 22, 2025

ಭಾರತಕ್ಕೆ 245 ರನ್​ಗಳ ಟಾರ್ಗೆಟ್ ನೀಡದ ದಕ್ಷಿಣ ಆಫ್ರಿಕಾ

ಬೆಂಗಳೂರು : ಅಂಡರ್​-19 ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ 245 ರನ್​ಗಳ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 244 ರನ್​ ಕಲೆ ಹಾಕಿದೆ. ಭಾರತ ಗೆಲ್ಲಲು 245 ರನ್​ ಗಳಿಸಬೇಕಿದೆ.

ಹರಿಣಗಳ ಪರ ಪ್ರಿಟೋರಿಯಸ್ 76, ರಿಚರ್ಡ್ ಸೆಲೆಟ್ಸ್ವೇನ್ 64, ನಾಯಕ ಜುವಾನ್ ಜೇಮ್ಸ್ 24, ಟ್ರಿಸ್ಟಾನ್ ಲ್ಯೂಸ್ 23 ಹಾಗೂ ಆಲಿವರ್ ವೈಟ್‌ಹೆಡ್ 22 ರನ್​ ಗಳಿಸಿದರು. ಭಾರತದ ಪರ ರಾಜ್​ ಲಿಂಬಾನಿ 3, ಮುಶೀರ್ ಖಾನ್ 2, ಸೌಮಿ ಪಾಂಡೆ ಹಾಗೂ ನಮನ್ ತಿವಾರಿ ತಲಾ 1 ವಿಕೆಟ್ ಪಡೆದರು.

ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಭಾರತ ತಂಡ ಸೆಮಿಫೈನಲ್​ ಪ್ರವೇಶಿಸಿದೆ. ಇತ್ತ ದಕ್ಷಿಣ ಆಫ್ರಿಕಾ ತಂಡ ಸೋಲು-ಗೆಲುವಿನೊಂದಿಗೆ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೂ ಸೋಲಿನ ರುಚಿ ತೋರಿಸಲು ಭಾರತದ ಹುಲಿಗಳು ರಣತಂತ್ರ ರೂಪಿಸಿದ್ದಾರೆ.

ಭಾರತ ತಂಡ

ಆದರ್ಶ್​ ಸಿಂಗ್, ಅರ್ಶಿನ್ ಕುಲಕರ್ನಿ, ಪ್ರಿಯಾಂಶು ಮೊಲಿಯಾ, ಉದಯ್ ಸಹರಾನ್(ನಾಯಕ), ಸಚಿನ್ ದಾಸ್, ಮುಶೀರ್ ಖಾನ್, ಅರವೆಲ್ಲಿ ಅವನೀಶ್, ಮುರುಗನ್ ಅಭಿಷೇಕ್, ರಾಜ್​ ಲಿಂಬಾನಿ, ನಮನ್ ತಿವಾರಿ, ಸೌಮಿ ಪಾಂಡೆ

RELATED ARTICLES

Related Articles

TRENDING ARTICLES