ತುಮಕೂರು: ಬರೋಬರೀ 1 ಲಕ್ಷದ 68 ಸಾವಿರ ಏಕಬಳಕೆ ಪ್ಲಾಸ್ಟಿಕ್ ಬಳಸಿ ನಮ್ಮ ತುಮಕೂರು ಎಂದು ರಚಿಸಿ ತುಮಕೂರು ಮಹಾನಗರ ಪಾಲಿಕೆ ಗಿನ್ನಿಸ್ ದಾಖಲೆ ಮಾಡಿತ್ತು ಈ ಬೆನ್ನಲ್ಲೇ ತುಮಕೂರು ಜಿಲ್ಲಾಡಳಿತ ಪ್ರಾರಂಭವಾಗಿರುವ ಸಂವಿಧಾನ ಜಾಗೃತಿ ಜಾಥಾದ ಆಚರಣೆ ಹಿನ್ನೆಲೆ ನಮ್ಮ ಸಂವಿಧಾನ ಎಂಬ ಕನ್ನಡ ಪದ ಬಳಸಿ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆ ನಿರ್ಮಿಸುವ ಪ್ರಯತ್ನ ನಡೆಸಿದೆ
ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥ ಅಭಿಯಾನ ನಡೆಸಲಾಗುತ್ತಿದೆ.
ತುಮಕೂರು ಜಿಲ್ಲೆಯ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಿರುಪಯುಕ್ತವಾಗಿ ಇದ್ದಂತಹ 1 ಲಕ್ಷದ 35, ಸಾವಿರದ ಖಾಲಿ ಪ್ಲಾಸ್ಟಿಕ್ ಬಾಟಲುಗಳನ್ನು ಸಂಗ್ರಹಿಸಿ ಅವುಗಳಿಂದ ವಿಶೇಷವಾಗಿ ನಮ್ಮ ಸಂವಿಧಾನ ಎಂಬ ಪದವನ್ನು ಕನ್ನಡದ ವರ್ಣ ಮಾಲೆ ಅಕ್ಷರಗಳಲ್ಲಿ ಜೋಡಿಸಲಾಗಿದೆ.
ಈ ಒಂದು ಪ್ಲಾಸ್ಟಿಕ್ ಬಾಟಲುಗಳಿಂದ ನಮ್ಮ ಸಂವಿಧಾನ ಎಂಬ ವಿಶೇಷ ಆಕೃತಿಯನ್ನು ಕನ್ನಡ ವರ್ಣಮಾಲೆಯಲ್ಲಿ ರಚಿಸಲು 305 ವಿದ್ಯಾರ್ಥಿಗಳು ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಕೈ ಜೋಡಿಸಿದ್ದಾರೆ.
ಜಿಲ್ಲಾಡಳಿತದ ಈ ವಿನೂತನವಾದ ಪ್ರಯೋಗವನ್ನು ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.