Friday, January 24, 2025

ಜು.6 ರಿಂದ ಭಾರತ-ಜಿಂಬಾಬ್ವೆ ನಡುವೆ 5 ಪಂದ್ಯಗಳ ಟಿ-20 ಸರಣಿ

ಬೆಂಗಳೂರು : ಭಾರತ ತಂಡವು ಜುಲೈ 6 ರಿಂದ 5 ಪಂದ್ಯಗಳ ಟಿ-20 ಸರಣಿಗಾಗಿ ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಲಿದೆ.

ಈ ಬಗ್ಗೆ ಬಿಸಿಸಿಐ ತಮ್ಮ ಅಧಿಕೃತ ಹೇಳಿಕೆ ನೀಡಿದೆ. ಮುಂಬರುವ 2024ರ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯ ಬಳಿಕ ಭಾರತ ತಂಡ, ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ.

ಈ ಪ್ರವಾಸದಲ್ಲಿ ಭಾರತ 5 ಪಂದ್ಯಗಳ ಟಿ-20 ಸರಣಿಯಲ್ಲಿ ಸೆಣಸಲಿದೆ. ಜುಲೈ 6 ರಿಂದ ಜುಲೈ 14ರವರೆಗೆ ನಡೆಯುವ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ತಂಡಕ್ಕೆ ಜಿಂಬಾಬ್ವೆ ಆತಿಥ್ಯ ವಹಿಸಲಿದೆ. 2010, 2015 ಹಾಗೂ 2016ರ ಬಳಿಕ ಭಾರತಕ್ಕೆ ಇದು 4ನೇ ಜಿಂಬಾಬ್ವೆ ಪ್ರವಾಸವಾಗಲಿದೆ.

ಭಾರತ-ಜಿಂಬಾಬ್ವೆ ವೇಳಾಪಟ್ಟಿ

  • 1ನೇ ಟಿ-20 : ಜುಲೈ 6
  • 2ನೇ ಟಿ-20 : ಜುಲೈ 7
  • 3ನೇ ಟಿ-20 : ಜುಲೈ 10
  • 4ನೇ ಟಿ-20 : ಜುಲೈ 13
  • 5ನೇ ಟಿ-20 : ಜುಲೈ 14

RELATED ARTICLES

Related Articles

TRENDING ARTICLES