Wednesday, January 22, 2025

ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ : ಪ್ರಭು ಚೌಹಾಣ್ ಭವಿಷ್ಯ

ಬೀದರ್ : ಕಾಂಗ್ರೆಸ್ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರದ ಎಲ್ಲಾ ಯೋಜನೆಗಳು ಬಂದ್ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚೌಹಾಣ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿದ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಮಾಜಿ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಪ್ರಭು ಚೌಹಾಣ್ ಅವರು, 6 ಕೋಟಿ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮೂಕ ಪ್ರಾಣಿಗಳಿಗೆ ಮೋಸ ಮಾಡುತ್ತಿದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ ಎಂದು ಕಿಡಿಕಾರಿದರು.

ಸರ್ಕಾರಕ್ಕೆ ಗೋ ಮಾತೆಯ ಶಾಪ ತಟ್ಟಲಿದೆ

ನಮ್ಮ ಸರ್ಕಾರದ ವೇಳೆ ಜಾರಿಯಾಗಿದ್ದ ಪಶು ಸಂಜೀವಿನಿ ಆ್ಯಂಬುಲೆನ್ಸ್ ಸೇವೆ, ಗೋ ಹತ್ಯೆ ನಿಷೇಧ ಮಾಡಿದರೆ, ಕಸಾಯಿ ಖಾನಾ ಓಪನ್ ಮಾಡಿದ್ದೀರಿ. ಸಹಾಯವಾಣಿ ಕೇಂದ್ರ ಸೇರಿದಂತೆ ಬಹುತೇಕ ಎಲ್ಲಾ ಯೋಜನೆಗಳಿಗೆ ಸರ್ಕಾರ ಮುನ್ನಡೆಸುಕೊಂಡು ಹೋಗುತ್ತಿಲ್ಲ. ಇಲ್ಲಿವರೆಗೂ ಪಶು ಸಂಗೋಪನೆ ಇಲಾಖೆಯಿಂದ ಒಂದೇ ಒಂದು ಮೀಟಿಂಗ್ ಮಾಡಲು ಆಗಿಲ್ಲ. ಇವರಿಂದ ಇಂತಹ ಸರ್ಕಾರಕ್ಕೆ ಗೋ ಮಾತೆಯ ಶಾಪ ತಟ್ಟಲಿದೆ ಎಂದು ಕುಟುಕಿದರು.

ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ

ಪ್ರಮುಖವಾಗಿ ಪಶು ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಹೋರಾಟ ಮಾಡಿದ ಬಿಜೆಪಿ ಮುಖಂಡರು, ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿ ಗೋವುಗಳನ್ನ ಕಸಾಯಿ ಖಾನೆಗೆ ಹಾಕಲಾಗುತ್ತಿದೆ. ಆದರೂ. ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಬಿಜೆಪಿ ಸರ್ಕಾರದ ವೇಳೆ ಪಶು ಸಂಗೋಪನೆ ಇಲಾಖೆ ಜಾರಿಗೊಳಿಸಿದ ಎಲ್ಲಾ ಯೋಜನೆಗಳು ಸ್ಥಗಿತಗೊಳಿಸಿದೆ ಎಂದು ಅಸಮಾಧಾನ ಹೊರಹಾಕಿದರು.

RELATED ARTICLES

Related Articles

TRENDING ARTICLES