Monday, January 13, 2025

6.5 ಓವರ್​ಗಳಲ್ಲೇ ಏಕದಿನ ಪಂದ್ಯ ಫಿನಿಶ್, ಸರಣಿ ಗೆದ್ದು ಬೀಗಿದ ಆಸಿಸ್

ಬೆಂಗಳೂರು : ವೆಸ್ಟ್​ ಇಂಡೀಸ್​ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಮೂರನೇ ಏಕದಿನ ಪಂದ್ಯದ ಫಲಿತಾಂಶ ಇತಿಹಾಸದ ಪುಟ ಸೇರಿದೆ.

ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡ ಹೀನಾಯವಾಗಿ ಸೋತಿದೆ. ಆಸ್ಟ್ರೇಲಿಯಾ ತಂಡ ಕೇವಲ 6.5 ಓವರ್​ಗಳಲ್ಲಿ ಕೆರಿಬಿಯನ್ನರ ಸಂಹಾರ ಮಾಡಿ ಗೆಲುವಿನ ನಗೆ ಬೀರಿದೆ.

ಆಸ್ಟ್ರೇಲಿಯಾ ನಾಯಕ ಸ್ಮಿತ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ವೆಸ್ಟ್​ ಇಂಡೀಸ್​ 24.1 ಓವರ್​ಗಳಲ್ಲಿ ಕೇವಲ 86 ರನ್​ಗಳಿಗೆ ಆಲೌಟ್​ ಆಯಿತು. ಅಲಿಕ್ ಅತಾನಾಜೆ 32 ರನ್​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್​ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಆಸ್ಟ್ರೇಲಿಯಾ ಪರ ಝೇವಿಯರ್ ಬಾರ್ಟ್ಲೆಟ್ 4, ಮೋರಿಸ್ ಹಾಗೂ ಝಂಪಾ ತಲಾ 2 ವಿಕೆಟ್ ಪಡೆದರು.

87 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 6.5 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಪಂದ್ಯ ಗೆದ್ದು ಬೀಗಿತು. ಆಸಿಸ್​ ಪರ ಜೋಶ್ ಇಂಗ್ಲಿಸ್ 35, ಜೇಕ್ ಫ್ರೇಸರ್​ ಮೆಕ್​ಗುರ್ಕ್​ 41 ರನ್​ ಸಿಡಿಸಿದರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು (3-0) ಕ್ಲೀನ್​ ಸ್ವೀಪ್​ ಮಾಡಿದೆ.

ವಿಂಡೀಸ್​ ವಿಕೆಟ್ ಪತನ ವಾಗಿದ್ದು ಹೀಗೆ

13 ರನ್​ ಗಳಿಸಿದ್ದಾಗ 1 ವಿಕೆಟ್, 38 ರನ್​ಗೆ ಎರಡನೇ ವಿಕೆಟ್, 43 ರನ್​ ಇದ್ದಾಗ 3ನೇ ವಿಕೆಟ್, 43 ರನ್​ಗೆ 4ನೇ ವಿಕೆಟ್, 71 ರನ್​ ಇದ್ದಾಗ 5ನೇ ವಿಕೆಟ್, 73 ರನ್​ ಇದ್ದಾಗ 6ನೇ ವಿಕೆಟ್, 73 ರನ್​ಗೆ 7ನೇ ವಿಕೆಟ್, 80 ರನ್​ ಇದ್ದಾಗ 8ನೇ ವಿಕೆಟ್, 86 ರನ್​ ಇದ್ದಾಗ 9ನೇ ವಿಕೆಟ್ ಹಾಗೂ 86 ರನ್ ಇದ್ದಾಗ 10ನೇ ವಿಕೆಟ್ ಪತನವಾಯಿತು.​

RELATED ARTICLES

Related Articles

TRENDING ARTICLES