Monday, December 23, 2024

ಭಾರತ ವಿರುದ್ಧ ‘ಸೋತ’ ಆಫ್ರಿಕಾ : 9ನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದ ಬ್ಲೂ ಬಾಯ್ಸ್

ಬೆಂಗಳೂರು : ಅಂಡರ್​-19 ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಹರಿಣಗಳನ್ನು ಬಗ್ಗುಬಡಿದ ಭಾರತದ ಯುವ ಹುಲಿಗಳು 9ನೇ ಬಾರಿಗೆ ವಿಶ್ವಕಪ್​ ಫೈನಲ್ ಪ್ರವೇಶ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 2 ವಿಕೆಟ್​ಗಳ ಜಯಭೇರಿ ಬಾರಿಸಿದೆ. ಈ ಮೂಲಕ ಮೊದಲ ತಂಡವಾಗಿ ಫೈನಲ್​ಗೆ ಲಗ್ಗೆ ಇಟ್ಟಿದೆ.

245 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಭಾರತ 48.5 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆರಂಭಿಕ ಆಘಾತ ಎದುರಿಸಿದ್ದ ಭಾರತಕ್ಕೆ ಸಚಿನ್ ದಾಸ್ 96, ನಾಯಕ ಉದಯ್ ಸಹರಾನ್ 81 ರನ್​ ಸಿಡಿಸಿ ಆಸರೆಯಾಗುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಉಳಿದಂತೆ ರಾಜ್​ ಲಿಂಬಾನಿ ಅಜೇಯ 19, ಅರ್ಶಿನ್ ಕುಲಕರ್ನಿ 12, ಅರವೆಲ್ಲಿ ಅವನೀಶ್ 10 ರನ್​ ಸಿಡಿಸಿದರು. ಆದರ್ಶ್​ ಸಿಂಗ್, ಮುಶೀರ್ ಖಾನ್ ನಿರಾಸೆ ಮೂಡಿಸಿದರು. ದಕ್ಷಿಣ ಆಫ್ರಿಕಾ ಪರ ಟ್ರಿಸ್ಟಾನ್ ಹಾಗೂ ಕ್ವೆನಾ ಮಫಕಾ ತಲಾ 3 ವಿಕೆಟ್ ಪಡೆದರು. ನಾಯಕ ಉದಯ್ ಸಹರಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಹೀಗಿದೆ ಭಾರತದ ಅಜೇಯ ಓಟ

ಭಾರತವು U-19 WC 2024ರಲ್ಲಿ ಅಜೇಯ ಓಟ ಮುಂದುವರಿಸಿದೆ. ಅಲ್ಲದೆ, ವಿಶ್ವಕಪ್​ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

  • ಬಾಂಗ್ಲಾದೇಶ ವಿರುದ್ಧ 84 ರನ್‌ಗಳ ಜಯ
  • ಐರ್ಲೆಂಡ್‌ ವಿರುದ್ಧ 201 ರನ್‌ಗಳ ಜಯ
  • ಅಮೇರಿಕಾ ವಿರುದ್ಧ 201 ರನ್‌ಗಳ ಗೆಲುವು
  • ನ್ಯೂಜಿಲೆಂಡ್ ವಿರುದ್ಧ 214 ರನ್‌ಗಳಿಂದ ಜಯ
  • ನೇಪಾಳ ವಿರುದ್ಧ 132 ರನ್‌ಗಳ ಗೆಲುವು
  • ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್‌ಗಳ ಗೆಲುವು

RELATED ARTICLES

Related Articles

TRENDING ARTICLES