Sunday, January 19, 2025

6 ವಾರಕ್ಕೆ 275+ ಕೋಟಿ ಕಲೆಕ್ಷನ್ : 250 ಸ್ಕ್ರೀನ್ಸ್​ನಲ್ಲಿ 50ನೇ ದಿನದತ್ತ ‘ಕಾಟೇರ’

ಬೆಂಗಳೂರು : ‘ಕಾಟೇರ’.. ಸಂಕಷ್ಟದಲ್ಲಿದ್ದ ಕನ್ನಡ ಚಿತ್ರರಂಗವನ್ನು ಅದ್ರಿಂದ ಪಾರು ಮಾಡಿ, ಹೊಸ ಜೋಶ್ ತುಂಬಿದ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಈ ಚಿತ್ರ 250 ಕೋಟಿ ಕ್ಲಬ್ ಸೇರೋದ್ರ ಜೊತೆಗೆ ಅಕ್ಷರಶಃ ಇಂಡಸ್ಟ್ರಿಯನ್ನ ಜೀವಂತವಾಗಿಸಿದೆ. ಬರೋಬ್ಬರಿ 250 ಸ್ಕ್ರೀನ್ಸ್​​ನಲ್ಲಿ ಯಶಸ್ವಿ 50 ದಿನದತ್ತ ಪಸಂದಾಗಿ ಮುನ್ನುಗ್ಗುತ್ತಿರೋ ಕಾಟೇರನ ಅಬ್ಬರ, ಆರ್ಭಟದ ಕಥೆ ಇಲ್ಲಿದೆ ನೋಡಿ.

ಜನ ಥಿಯೇಟರ್​ಗೆ ಬರ್ತಿಲ್ಲ. ಕನ್ನಡ ಸಿನಿಮಾಗಳು ಬ್ಯುಸಿನೆಸ್ ಆಗ್ತಿಲ್ಲ. ಅಯ್ಯೋ ನಿರ್ಮಾಪಕರು ಉಸಿರಾಡೋದು ಹೇಗೆ..? ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕೊಟ್ಟ ಸಿನಿಮಾ ಕಾಟೇರ. ಹೌದು.. ಬಿಗ್ ಸ್ಟಾರ್ಸ್​ ಬಿಗ್ ಹಿಟ್ಸ್ ಇಲ್ಲದೆ ಸೊರಗಿ ಹೋಗಿದ್ದ ಸ್ಯಾಂಡಲ್​ವುಡ್​ಗೆ ಬೂಸ್ಟರ್​​ ಡೋಸ್​​ನಂತೆ ಹೊಸ ಜೋಶ್ ತುಂಬಿದ ಚಿತ್ರ ನಟ ದರ್ಶನ್ ನಟನೆಯ ಕಾಟೇರ. 2023ರ ವರ್ಷಾಂತ್ಯಕ್ಕೆ ಬಂದ ಕಾಟೇರ, ಅಚ್ಚ ಕನ್ನಡದ ಮಣ್ಣಿನ ಚಿತ್ರವಾಗಿ ನೂತನ ದಾಖಲೆ ಬರೆದಿದೆ.

ಕೆಜಿಎಫ್, ಕಾಟೇರ ಸಿನಿಮಾಗಳು ಕೂಡ ಮಾಡಲಾರದ ರೆಕಾರ್ಡ್​ನ ಮಾಡಿರೋ ಕಾಟೇರ, ಫಾಸ್ಟೆಸ್ಟ್ 100 ಕ್ರೋರ್ ಬಾಕ್ಸ್ ಆಫೀಸ್ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡದಲ್ಲೇ ರಿಲೀಸ್ ಆದ ಈ ಚಿತ್ರ ಪರಭಾಷಿಗರನ್ನೂ ಸೆಳೆಯುವಂತೆ ಮಾಡಿದೆ. ಸದ್ಯ ಯಶಸ್ವಿ ಆರು ವಾರಗಳನ್ನ ಪೂರೈಸಿರೋ ಈ ಸಿನಿಮಾ ಬರೋಬ್ಬರಿ 250ಕ್ಕೂ ಅಧಿಕ ಸ್ಕ್ರೀನ್ಸ್​ನಲ್ಲಿ 50ನೇ ದಿನದತ್ತ ಮುನ್ನುಗ್ಗುತ್ತಿದೆ.

6 ವಾರದಲ್ಲಿ 275+ ಕೋಟಿ ಗಳಿಸಿರೋ ‘ಕಾಟೇರ’

ಆರೇ ವಾರದಲ್ಲಿ ಸುಮಾರು 275 ಕೋಟಿ ಗಳಿಸಿರೋ ಕಾಟೇರ ಸಿನಿಮಾ, ಕಂಟೆಂಟ್​​ ಗಟ್ಟಿಯಾಗಿದ್ರೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇಲ್ಲದೆಯೂ ಸಹ ನೂರಾರು ಕೋಟಿ ಬ್ಯುಸಿನೆಸ್ ಮಾಡಬಹುದು ಅನ್ನೋದಕ್ಕೆ ಸಾಕ್ಷಿಯಾಗಿದೆ. ತರುಣ್ ಸುಧೀರ್ ನಿರ್ದೇಶನ, ರಾಕ್​ಲೈನ್ ವೆಂಕಟೇಶ್ ನಿರ್ಮಾಣ, ಹರಿಕೃಷ್ಣ ಮ್ಯೂಸಿಕ್, ಮಾಸ್ತಿ ಮಾಸ್ ಡೈಲಾಗ್ಸ್, ಜಡೇಶ್ ಹಂಪಿ ಅವ್ರ ಕಥೆ, ಆರಾಧನಾ ಗ್ಲಾಮರ್, ಶ್ರುತಿ, ಅವಿನಾಶ್, ಜಗಪತಿ ಬಾಬು, ಕುಮಾರ್ ಗೋವಿಂದ್ ಅವ್ರ ಮನೋಜ್ಞ ಅಭಿನಯ ಹೀಗೆ ಎಲ್ಲವೂ ಕಾಟೇರನಿಗೆ ಪ್ಲಸ್ ಆಗಿದೆ.

ಫೆ.16ಕ್ಕೆ ಡೆವಿಲ್ ಚಿತ್ರದ ಫಸ್ಟ್​ಲುಕ್ ಲಾಂಚ್

ಇದೇ ಫೆಬ್ರವರಿ 9ಕ್ಕೆ ಕಾಟೇರ ಸಿನಿಮಾ ಓಟಿಟಿಗೂ ಲಗ್ಗೆ ಇಡಲಿದ್ದು, ಝೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಲ್ಲಿಗೆ ಕಾಟೇರ ರಿಲೀಸ್ ಆಗಿ 45 ದಿನಗಳಾಗಲಿದೆ. ಇನ್ನು ಡಿ ಬಾಸ್ ಬರ್ತ್ ಡೇಗೆ ಮಿಲನಾ ಪ್ರಕಾಶ್ ನಿರ್ದೇಶನದ ಡೆವಿಲ್ ಚಿತ್ರದ ಫಸ್ಟ್​ಲುಕ್ ಲಾಂಚ್ ಆಗೋ ಸಾಧ್ಯತೆಯಿದೆ. ಇದು ಅವ್ರ ಕರಿಯರ್​​ನ ಮತ್ತೊಂದು ಮೈಲಿಗಲ್ಲು ಸಿನಿಮಾ ಆಗಲಿದ್ದು, ವಿಭಿನ್ನ ಕಥೆಯ ಜೊತೆ ಡಿಫರೆಂಟ್ ಲುಕ್​ನಲ್ಲಿ ಕಿಕ್ ಕೊಡೋ ಮುನ್ಸೂಚನೆ ನೀಡಿದ್ದಾರೆ ದಾಸ ದರ್ಶನ್.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES