ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ಜನರನ್ನು ಪೀಡಿಸಿ ಮರೆಯಾಗಿದ್ದ ಮಂಗನ ಕಾಯಿಲೆ ಮತ್ತೆ ಮಲೆನಾಡು ಭಾಗದಲ್ಲಿ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡಿದೆ.
ರಾಜ್ಯದ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಇದೀಗ ಮತ್ತೆ ವಕ್ಕರಿಸಿಕೊಂಡಿದೆ. ಇನ್ನೂ ಈ ರೋಗವು ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಒಬ್ಬರನ್ನ ಬಲಿಪಡೆದುಕೊಂಡು ರಾಜ್ಯದಲ್ಲಿ ಆತಂಕ ಸೃಷ್ಟಿಸುತಿದ್ದು, ಆರೋಗ್ಯ ಇಲಾಖೆಗೂ ತಲೆ ನೋವಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಕಾಯಿಲೆ ಅಲ್ಲಿನ ನಿವಾಸಿಗಳನ್ನು ಆತಂಕಕ್ಕೆ ಈಡುಮಾಡಿದೆ. ಇನ್ನೂ ಕಳೆದ ಒಂದು ತಿಂಗಳ ಅವಧಿಯಲ್ಲಿ 2 ಸಾವಿರಕ್ಕೂ ಹೆಚ್ಚು ಟೆಸ್ಟ್ ಗಳನ್ನು ಮಾಡಲಾಗಿದ್ದು, 64 ಮಂದಿ ಮಂಗನ ಕಾಯಿಲೆ ದೃಢವಾಗಿದೆ. ಇಬ್ಬರನ್ನೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಬಲಿ ಪಡಿದುಕೊಂಡಿದೆ.
ಮಂಗನ ಕಾಯಿಲೆ ರೋಗದ ಲಕ್ಷಣಗಳೇನು?
- ಸಾಮಾನ್ಯವಾಗಿ ಸತ್ತ ಕೋತಿಗಳಿಂದ ಹರಡುವ ಕಾಯಿಲೆ
- ವೇಗವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಪಸರಿಸುತ್ತದೆ
- ವಿಪರೀತ ಜ್ವರ, ಕೆಮ್ಮು, ನೆಗಡಿ
- ಮೈ ಕೈ ನೋವು, ವಿಪರೀತ ತಲೆನೋವು…!
ಇನ್ನೂ ಮಂಗನ ಕಾಯಿಲೆ ಹಾವಳಿ ಜೋರಾಗುತ್ತಿದಂತೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು ಇದನ್ನು ತಡೆಗಟ್ಟಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಶಿವಮೊಗ್ಗದಲ್ಲಿ ಈ ಬಗ್ಗೆ ಸಭೆ ನಡೆಸಿದ್ದು ರೋಗವನ್ನು ಹತೋಟಿಗೆ ತರಲು ಮುಂದಾಗಿದ್ದಾರೆ. ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿ ಅಗತ್ಯ ಔಷಧಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು. ಅನುಮಾನ ಅಥವಾ ರೋಗದ ಲಕ್ಷಣ ಕಂಡು ಬಂದ ವ್ಯಕ್ತಿಗೆ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ್ ಹೇಳಿದ್ದಾರೆ.
ಒಟ್ನಲಿ ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗಾವಾಕ್ಷಿ ಅನ್ನೋ ರೀತಿ ಸಾಂಕ್ರಾಮಿಕ ರೋಗಗಳು ರಾಜ್ಯದ ಜನತೆ ನಿದ್ರೆ ಕೆಡಿಸುತ್ತಿದ್ದು. ಈಗ ವಕ್ಕರಿಸಿರುವ ಮಹಾಮಾರಿಗೆ ಆರೋಗ್ಯ ಇಲಾಖೆ ಯಾವ ರೀತಿಯಲ್ಲಿ ಬ್ರೇಕ್ ಹಾಕುತ್ತೆ ಅನ್ನೋದನ್ನ ಕಾದುನೋಡಬೇಕಿದೆ.