Sunday, December 22, 2024

ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ : ಶಾಸಕ ಬಾಲಕೃಷ್ಣ

ರಾಮನಗರ : ಬಿಜೆಪಿ ಸಂಸದರು ಗಂಡಸರಲ್ಲ, ಶೋ ಪೀಸ್‌ಗಳು ಎಂದು ಮಾಗಡಿ ಶಾಸಕ ಹೆಚ್‌.ಸಿ. ಬಾಲಕೃಷ್ಣ ಲೇವಡಿ ಮಾಡಿದ್ದಾರೆ.

ರಾಮನಗರದ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತೆಗೆದುಕೊಂಡು ಬರೋದು ಅಷ್ಟೇ ಬಿಜೆಪಿಗರ ಕೆಲಸ ಎಂದು ಕುಟುಕಿದ್ದಾರೆ.

ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯ ಕರ್ನಾಟಕ. ಆದರೆ, ನಮಗೆ ಕೊಡಬೇಕಾದ ಅನುದಾನವನ್ನು ಕೇಂದ್ರ ಕೊಡುತ್ತಿಲ್ಲ. ಬಿಜೆಪಿಯ ಸಂಸದರು ಪ್ರಧಾನಿ ಮೋದಿ ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ. ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ ಎಂದು ಛೇಡಿಸಿದ್ದಾರೆ.

ಬಿಜೆಪಿ ಸಂಸದರು, ಸಚಿವರು ಕರ್ನಾಟಕದ ಪರ ಧ್ವನಿ ಎತ್ತಿಲ್ಲ. ಹಾಗಾಗಿ, ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಪಾಪ ನಮ್ಮ ಪ್ರತಿಭಟನೆ ನೋಡಿ ಬಿಜೆಪಿಯ ಗಂಡಸರು ಹೋರಾಟ ಮಾಡುತ್ತಾರಾ? ಅಂತ ನೋಡೋಣ ಎಂದು ಟೀಕಿಸಿದ್ದಾರೆ.

ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ

ಅವರು ಪ್ರತಿಭಟನೆ ಮಾಡಿಲ್ಲ ಅಂದರೆ ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ ಎಂದರ್ಥ. ಈಗಿರುವ ಬಿಜೆಪಿ ಸಂಸದರು ಯಾರು ಗಂಡಸರಲ್ಲ ಎಂದು ಬಿಜೆಪಿ ಸಂಸದರನ್ನ ಟೀಕಿಸುವ ಭರದಲ್ಲಿ ಶಾಸಕ ಹೆಚ್‌.ಸಿ. ಬಾಲಕೃಷ್ಣ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES