Wednesday, January 22, 2025

IND vs PAK: ಭಾರತ vs ಪಾಕಿಸ್ತಾನ್ ಕದನಕ್ಕೆ ಟೈಮ್ ಫಿಕ್ಸ್​

ಬೆಂಗಳೂರು: ಟಿ20 ವಿಶ್ವಕಪ್​ನ ವೇಳಾಪಟ್ಟಿ ಪ್ರಕಟವಾಗಿದ್ದು,ಅಂದ್ರೆ ಯಾವ ಸಮಯದಲ್ಲಿ ನಡೆಯುತ್ತದೆ ಎಂಬ ಮಾಹಿತಿ ಮಾತ್ರ ಪ್ರಕಟವಾಗಿರಲಿಲ್ಲ.ಅಂದರೆ ಎಷ್ಟು ಗಂಟೆಗೆ ಪಂದ್ಯ ಶುರುವಾಗಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿತ್ತು.ಇದೀಗ ಭಾರತ ತಂಡದ ಪಂದ್ಯಗಳ ಸಮಯ ಬಹಿರಂಗವಾಗಿದೆ. ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.

ಜೂನ್ 1 ರಿಂದ ಈ ಬಾರಿಯ ಚುಟುಕು ವಿಶ್ವಕಪ್ ಕದನ ಶುರುವಾಗಲಿದ್ದು, ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ.

ಭಾರತದ ಪಂದ್ಯಗಳು ಯುಎಸ್​ಎನಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಆರಂಭವಾಗಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನೇರ ಪ್ರಸಾರವಾಗಲಿದೆ. ಇಲ್ಲಿ ಭಾರತ ಮತ್ತು ಯುಎಸ್​ಎ ನಡುವೆ 10.30 ಗಂಟೆಗಳ ಸಮಯ ವ್ಯತ್ಯಾಸವಿದೆ. ಅತ್ತ ಯುಎಸ್​ಎನಲ್ಲಿ ರಾತ್ರಿಯಾಗಿದ್ದರೆ, ಇತ್ತ ಭಾರತದಲ್ಲಿ ಬೆಳಿಗ್ಗೆಯಾಗಿರುತ್ತದೆ. ಹೀಗಾಗಿಯೇ ಭಾರತದ ಪಂದ್ಯಗಳನ್ನು ಯುಎಸ್​ಎನಲ್ಲಿ ಬೆಳಿಗ್ಗೆ ಆಯೋಜಿಸಲು ನಿರ್ಧರಿಸಲಾಗಿದೆ.

ಇದರಿಂದ ವೀಕ್ಷಕರ ಕೊರತೆ ಉಂಟಾಗುವುದಿಲ್ಲ. ಹೀಗಾಗಿ ಭಾರತದ ಪಂದ್ಯಗಳಿಗೆ ಬೆಳಿಗ್ಗೆ ಸಮಯ ನಿಗದಿ ಮಾಡಲಾಗಿದೆ.

ಭಾರತ ಮತ್ತು ಪಾಕ್ ಮುಖಾಮುಖಿ:

ಟಿ20 ವಿಶ್ವಕಪ್​ನ ಹೈವೊಲ್ಟೆಜ್ ಫೈಟ್ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಜೂನ್ 9 ರಂದು ನಡೆಯಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯಕ್ಕೆ ನ್ಯೂಯಾರ್ಕ್​ನ ಹೊಸ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ಈ ಪಂದ್ಯವು ಯುಎಸ್​ಎ ಕಾಲಮಾನ ಬೆಳಿಗ್ಗೆ 9.30 ರಿಂದ ಶುರುವಾಗಲಿದ್ದು, ಭಾರತದಲ್ಲಿ ರಾತ್ರಿ 8 ಗಂಟೆಯಿಂದ ನೇರ ಪ್ರಸಾರವಾಗಲಿದೆ.

ಭಾರತದ T20 ವಿಶ್ವಕಪ್ ವೇಳಾಪಟ್ಟಿ:

  1. ಭಾರತ vs ಐರ್ಲೆಂಡ್, ಜೂನ್ 5, ನ್ಯೂಯಾರ್ಕ್ (8:00 PM IST)
  2. ಭಾರತ vs ಪಾಕಿಸ್ತಾನ್, ಜೂನ್ 9, ನ್ಯೂಯಾರ್ಕ್ (8:00 PM IST)
  3. ಭಾರತ vs ಯುಎಸ್​ಎ, ಜೂನ್ 12, ನ್ಯೂಯಾರ್ಕ್ (8:00 PM IST)
  4. ಭಾರತ vs ಕೆನಡಾ, ಜೂನ್ 15, ಫ್ಲೋರಿಡಾ (ರಾತ್ರಿ 8:00 IST)

 

RELATED ARTICLES

Related Articles

TRENDING ARTICLES