ಶಿವಮೊಗ್ಗ: ನನ್ನ ಜೀವನಲ್ಲಿ ಮೂರು ಸಂತೋಷದ ದಿನಗಳನ್ನು ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಅದರಲ್ಲಿ ಎಲ್.ಕೆ ಅಡ್ವಾನಿಯವರಿಗೆ ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿರುವುದು ಕೂಡ ಅದರಲ್ಲಿ ಒಂದು ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಮಾದ್ಯಮದ ಜೊತೆ ಮಾತನಾಡಿದ ಅವರು, ಭಾರತದ ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾನಿಯವರಿಗೆ ಭಾರತ ಸರ್ಕಾರವು ಭಾರತ ರತ್ನ ನೀಡಿರುವುದು ಸಂಸತದ ಸಂಗತಿ, ರಥಯಾತ್ರೆ ಮಾಡುವಾಗ ನಾನು ಅಡ್ವಾಣಿಯವರ ಜೊತೆಯಲ್ಲಿ ಭಾಗವಹಿಸಿದ್ದೆ ಎಂದರು.
ಇದನ್ನೂ ಓದಿ: ಹಿರಿಯ ರಾಜಕಾರಣಿ ಎಲ್.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಸರ್ಕಾರ!
ಎಂಎಲ್ಎ, ಎಂಪಿ ಸಿಗಲಿಲ್ಲ ಅಂತ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ವ್ಯಾಮೋಹಿಗಳನ್ನು ನೋಡುತ್ತೇವೆ. ಅಂತದರಲ್ಲಿ ಅಧಿಕಾರ ಬಯಸದೇ ಅಟಲ್ ಜೀ ಪ್ರಧಾನಿ ಆಗುತ್ತಾರೆ ಅಂತ ಘೋಷಣೆ ಮಾಡಿದ್ದರು, ಪ್ರತಿಯೊಬ್ಬ ಕಾರ್ಯಕರ್ತರ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರು. ನಾನು ಅವರ ಮನೆಗೆ ಹೋದಾಗ ಅಣ್ಣಾನೋ ತಮ್ಮ ಬಂದಿದ್ದಾನೆ ಅಂತಾ ನಮ್ಮನ್ನ ನೋಡಿದ್ದರು, ವಿಶ್ವ ನಾಯಕರಲ್ಲಿ ವಿಶ್ವನಾಯಕ ಅಡ್ವಾಣಿ ಅವರು ಅವರಿಗೆ ಭಾರತ ರತ್ನ ಸಿಕ್ಕಿರೋದು ನಮಗೆಲ್ಲ ಆನಂದ ತಂದಿದೆ ಎಂದು ಅಡ್ವಾಣಿಯವರನ್ನು ಹಾಡಿ ಹೊಗಳಿದ್ದಾರೆ.