Saturday, January 11, 2025

ದೆಹಲಿ ಕಾಂಗ್ರೆಸ್​ ಪ್ರತಿಭಟನೆ : ಚುನಾವಣೆಗೂ ಮೊದಲು ಶರಣಾಗುವ ಪ್ರಕ್ರಿಯೆ!

ಬೆಂಗಳೂರು : ರಾಜ್ಯ ಕಾಂಗ್ರೆಸ್​ ಪಕ್ಷದ ಮುಖಂಡರು ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಇದೇ ಫೆ.7 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿರುವ ಕುರಿತು ವಿಪಕ್ಷ ನಾಯಕ ಆರ್​.ಅಶೋಕ್​ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಹೊರಟಿರುವುದು ಚುನಾವಣೆಗೂ ಮೊದಲು ಶರಣಾಗುವ ಪ್ರಕ್ರಿಯೆ, ಸಂಸದ ಡಿ.ಕೆ ಸುರೇಶ್ ಅವರು ದೇಶ ಒಡೆಯಬೇಕು ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕಾಂಗ್ರೆಸ್​ಗೆ ಹಿನ್ನಡೆಯಾಗಿದೆ ಅವರ ಹೇಳಿಕೆಯನ್ನು AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ಖಂಡಿಸಿದ್ದಾರೆ ಇದನ್ನೆಲ್ಲಾ ದಾರಿ ತಪ್ಪಿಸುವ ಉದ್ದೇಶದಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಹಿರಿಯ ರಾಜಕಾರಣಿ ಎಲ್​.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಸರ್ಕಾರ!

ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ಕಾಂಗ್ರೆಸ್ ಪ್ರೇರಣೆಯಿಂದ ಕಿತ್ತು ಹಾಕಿದ್ದಾರೆ, ಇದರಿಂದಾಗಿ ರಾಜ್ಯದಲ್ಲಿ ಹೋರಾಟ ನಡೆಯುತ್ತಿದೆ, ರಾಮ ಎಲ್ಲರ ಮನೆಮನೆಗಳನ್ನು ತಲುಪಿದ್ದಾನೆ ಈ ಎಲ್ಲ ಬೆಳವಣಿಗೆಗಳಿಂದ ಕಾಂಗ್ರೆಸ್​ ಗೆ ಭಯ ಶುರುವಾಗಿದೆ.

ಕೇಂದ್ರದ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರದ ರಾಜ್ಯ ಸಭೆಯಲ್ಲಿ ಖರ್ಗೆ ಇದ್ದಾರೆ, ಡಿಕೆ ಸುರೇಶ್ ಕೂಡ ಇದ್ದಾರೆ, ಇದುವರೆಗೆ 10 ಬಜೆಟ್​ಗಳು ಮಂಡನೆಯಾಗಿದೆ. ಆದರೇ, ಎಂದೂ ಮಾತಾಡದವರು ಇಂದು ಎಕಾಏಕಿ ಮಾತಾಡಿದ್ದಾರೆ ಇದೆಲ್ಲಾ ಚುನಾವಣೆಯ ಸ್ಟಂಟ್ ಅಷ್ಟೇ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES