Monday, May 13, 2024

ಆರ್ಥಿಕ ಪ್ರಗತಿಯ ಚಿತ್ರಣ ಈ ಬಜೆಟ್ ನಲ್ಲಿದೆ : ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಕಳೆದ ಹತ್ತು ವರ್ಷದಲ್ಲಿ ಆಗಿರುವ ಆರ್ಥಿಕ ಪ್ರಗತಿಯ ಸ್ಪಷ್ಟ ಚಿತ್ರಣ ಈ ಬಜೆಟ್ ನಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2014 ರಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಭಾರತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಆರ್ಥಿಕ ಸದೃಢತೆಯತ್ತ ಭಾರತವನ್ನು ತರಲು ಸಾಧ್ಯವಾಗಿದೆ. 2013-14 ರಲ್ಲಿ ದೇಶದ ಹಣದುಬ್ಬರ ಎರಡಂಕಿಯಲ್ಲಿತ್ತು ಈಗ ಅದು ನಾಲ್ಕುವರೆ ಆಸುಪಾಸು ಇರುವುದರಿಂದ ಜನ ಸಾಮಾನ್ಯರ ಮೇಲಿನ ಹೊರೆ ಕಡಿಮೆ ಆಗಿದೆ ಎಂದು ಹೇಳಿದರು.

ನಿರಂತರ ಹತ್ತು ವರ್ಷದಿಂದ ಶೇ 7% ರಷ್ಟು ಪ್ರಗತಿ ಕಾಯ್ದುಕೊಂಡಿರುವುದು ಮತ್ತು ಈ ದೇಶದಲ್ಲಿ ಬಡತನದಿಂದ ಜನರನ್ನು ಮೇಲೆತ್ತಲು ನಡೆಸಿದ ಪ್ರಧಾನಿ ಮೋದಿಯವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಇದಲ್ಲದೇ ಪ್ರಧಾನ ಮಂತ್ರಿ ಜನಕಲ್ಯಾಣ ಯೋಜನೆಗಳಾದ ಆವಾಸ್ ಯೊಜನೆ, ಮುದ್ರಾ, ಸ್ವಚ್ಚಭಾರತದಂತಹ ಎಲ್ಲ ಯೋಜನೆಗಳಿಗೆ ಹಣ ಒದಗಿಸಿರುವುದು ಸಮಾಜದಲ್ಲಿನ ಕಟ್ಟ ಕಡೆಯ ಜನರನ್ನು ಕೂಡ ಆರ್ಥಿಕ ಪ್ರಗತಿಯಲ್ಲಿ ತನ್ನ ಪಾಲುದಾರರನ್ನಾಗಿ ಮಾಡಿಕೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: ಜಾರ್ಖಂಡ್‌ ಸಿಎಂ ಆಗಿ ಚಂಪಯಿ ಸೋರೆನ್ ಪ್ರಮಾಣವಚನ ಸ್ವೀಕಾರ

ಅಲ್ಲದೇ ವಿದೇಶಿ ನೇರ ಬಂಡವಾಳ ಹೆಚ್ಚಾಗಿದೆ. ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಕೃಷಿ ವಲಯ ಅಭಿವೃದ್ಧಿ ಆಗಿದೆ. ಸೇವಾ ವಲಯದಲ್ಲಿ ಎರಡು ಪಟ್ಟು ಉತ್ಪಾದನೆ ಹೆಚ್ಚಾಗಿದೆ.‌ಇದರ ಜೊತೆಗೆ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ.

ಈ ಮಧ್ಯಂತರ ಬಜೆಟ್ ನಲ್ಲಿ ಮೂಲಸೌಕರ್ಯಕ್ಕೆ ಒಂದೂವರೆ ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದರಿಂದ ವಿಕಸಿತ ಭಾರತ ನಿರ್ಮಾಣ ಮಾಡಲು ಬಹಳ ದೊಡ್ಡ ಸಹಾಯವಾಗಲಿದೆ. ದೊಡ್ಡ ಪ್ರಮಾಣದಲ್ಲಿ ‌ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಆಗಲಿದೆ ಎಂದರು.

ಈ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಯಾವುದೇ ತೆರಿಗೆ ಹೊರೆ ಇಲ್ಲ. ಏಳು ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ. ಇದರಿಂದ ನೌಕರದಾರರಿಗೆ ಅನುಕೂಲ ಆಗಿದೆ. ಅಲ್ಲದೇ ಜನ ಕಲ್ಯಾಣಕ್ಕಾಗಿ ಹಣ ಒದಗಿಸಿದ್ದಾರೆ. ಎಲ್ಲರನ್ನು ಒಳಗೊಂಡಿರುವ ಸಕಾರಾತ್ಮಕ ಹಾಗೂ ವಿಕಸಿತ ಭಾರತ ಮಾಡುವ ಬಜೆಟ್ ಇದಾಗಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES