Saturday, May 18, 2024

ಜಾರ್ಖಂಡ್‌ ಸಿಎಂ ಆಗಿ ಚಂಪಯಿ ಸೋರೆನ್ ಪ್ರಮಾಣವಚನ ಸ್ವೀಕಾರ

ಜಾರ್ಖಂಡ್: ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ (ಜೆಎಂಎಂ ನಾಯಕ) ಮತ್ತು ಸಿಬು ಸೋರೆನ್ ಬೆಂಬಲಿಗ ಚಂಪಯಿ ಸೋರೆನ್ ನಡುವೆ ಸಾಕಷ್ಟು ಹೈಡ್ರಾಮಾ ಇದ್ದರೂ ರಾಂಚಿಯ ರಾಜಭವನದಲ್ಲಿ ಪದಗ್ರಹಣ ಸಮಾರಂಭದಲ್ಲಿ ಜಾರ್ಖಂಡ್ ಸಿಎಂ ಆಗಿ ಚಂಪಯಿ ಸೋರೆನ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಗುರುವಾರ ತಡ ರಾತ್ರಿ ಜಾರ್ಖಂಡ್ ರಾಜ್ಯಪಾಲರು ಅವರನ್ನು ನಿಯೋಜಿತ ಸಿಎಂ ಘೋಷಣೆ ಮಾಡಿ, ಸರ್ಕಾರ ರಚಿಸಲು ಆಹ್ವಾನಿಸಿದರು. ಸರ್ಕಾರ ರಚಿಸಲು ಅಗತ್ಯ ಶಾಸಕರ ಬೆಂಬಲ ಇದ್ದರೂ ರಾಜ್ಯಪಾಲರು ಆಹ್ವಾನ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಿಎಂ ಹೇಮಂತ್ ಸೋರೆನ್ ಅವರನ್ನು ಕಾನೂನು ಜಾರಿ ಸಂಸ್ಥೆಗಳು ಬಂಧಿಸಿದ್ದವು. ಹೀಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಶಾಸಕರು ಆಗ ಸಾರಿಗೆ ಸಚಿವರಾಗಿದ್ದ ಚಂಪಯಿ ಸೋರೆನ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES