Sunday, January 19, 2025

ಶಿವಮೊಗ್ಗ ಜನತೆಗೆ ಸಿಹಿ ಸುದ್ದಿ : ಹೊಸ ರೈಲ್ವೆ ಸಂಪರ್ಕಕ್ಕೆ ಕೇಂದ್ರದಿಂದ 200 ಕೋಟಿ

ಶಿವಮೊಗ್ಗ : ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್​ನಲ್ಲಿ ​ಶಿವಮೊಗ್ಗ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ರೈಲ್ವೆ ಇಲಾಖೆಗೆ ನೀಡಿದ ಅನುದಾನದಲ್ಲಿ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಸಂಪರ್ಕ ಆರಂಭಿಸಲು 200 ಕೋಟಿ ರೂ.ಗಳನ್ನು ರೈಲ್ವೆ ಸಚಿವಾಲಯ ಮೀಸಲಿಟ್ಟಿದೆ ಎಂದು ಹೇಳಿದ್ದಾರೆ.

ರಾಜ್ಯದ ವಿವಿಧ ರೈಲ್ವೆ ಯೋಜನೆಗಳಿಗಾಗಿ ಒಟ್ಟು 7,524 ಕೋಟಿ ರೂ. ಅನುದಾನ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಹೊಸ ಮಾರ್ಗಗಳ ಅನುಷ್ಠಾನಕ್ಕೆ 1,531 ಕೋಟಿ

ರಾಜ್ಯದ ರೈಲ್ವೆ ಮೂಲಸೌಲಭ್ಯ ಹಾಗೂ ಸಂಪರ್ಕ ವಿಸ್ತರಣೆಗಾಗಿ 2,286 ಕೋಟಿ ರೂ., ಡಬ್ಲಿಂಗ್ ಹಾಗೂ ಹೊಸ ಮಾರ್ಗಗಳ ಅನುಷ್ಠಾನಕ್ಕಾಗಿ 1,531 ಕೋಟಿ ರೂ. ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು 987 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ. ಇದರಿಂದ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ಬಲ ಸಿಕ್ಕಂತಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

RELATED ARTICLES

Related Articles

TRENDING ARTICLES