Monday, May 6, 2024

Poonam Pandey Death: ಬಾಲಿವುಡ್​ ಮಾಡೆಲ್‌ ಪೂನಂ ಪಾಂಡೆ ನಿಧನ

ಲಖನೌ: ಬಾಲಿವುಡ್ ಕಾಂಟ್ರವರ್ಸಿ ಕ್ವೀನ್‌ ಪೂನಂ ಪಾಂಡೆ ಇಂದು ಗರ್ಭಕಂಠದ ಕ್ಯಾನ್ಸರ್​ನಿಂದ ನಿಧನವಾಗಿದ್ದಾರೆ.

ಖ್ಯಾತ ರೂಪದರ್ಶಿ ಹಾಗೂ ನಟಿ ಪೂನಂ ಪಾಂಡೆ ಅವರು ಕ್ಯಾನ್ಸರ್​ನಿಂದ ಮೃತಪಟ್ಟಿದ್ದು, ನಟಿ ರಿಯಾಲಿಟಿ ಶೋ, ಮಾಡೆಲಿಂಗ್, ಆಲ್ಬಂ ವಿಡಿಯೋಗಳ ಮೂಲಕ ಗುರುತಿಸಿಕೊಂಡಿದ್ದರು. ಅವರು 32ನೇ ವಯಸ್ಸಿನಲ್ಲಿ ಕ್ಯಾನ್ಸರ್​ಗೆ ಬಲಿಯಾಗಿ ಇಹಲೋಕ ತ್ಯಜಿಸಿದ್ದಾರೆ.

7 ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಕನ್ನಡದ ಲವ್ ಈಸ್‌ ಪಾಯ್ಸನ್ ಚಿತ್ರದಲ್ಲೂ ನಟಿಸಿದ್ದರು

ಪೂನಂ ಪಾಂಡೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಮಾಡಲಾಗಿದೆ. ‘ಇಂದು ಮುಂಜಾನೆ ಸಾಕಷ್ಟು ಕಷ್ಟಕರವಾಗಿತ್ತು. ಸರ್ವಿಕಲ್ ಕ್ಯಾನ್ಸರ್​ನಿಂದ ನಮ್ಮ ಪ್ರೀತಿಯ ಪೂನಂ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಈ ದುಃಖದ ಸಂದರ್ಭದಲ್ಲಿ ನಮಗೆ ಪ್ರೈವಸಿ ನೀಡಿ’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಲಾಗಿದೆ..

RELATED ARTICLES

Related Articles

TRENDING ARTICLES