ಬೆಂಗಳೂರು: ರಾಜ್ಯ ಬಜೆಟ್ಗೂ ಮೊದಲೇ ಸರ್ಕಾರ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಬಿಗ್ ಶಾಕ್ ನೀಡಿದ್ದು, ಮತ್ತೆ ಬಿಯರ್ ಬೆಲೆ ಏರಿಕೆಯಾಗಿದೆ.
ಹೌದು, ಸರ್ಕಾರ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185 ರಿಂದ 195 ಕ್ಕೆ ಹೆಚ್ಚಳ ಮಾಡಿರುವುದರಿಂದ ಬಿಯರ್ 233 ಏರಿಕೆಯಾಗಿದೆ. ಗುರುವಾರದಿಂದ (ಫೆ.1) ಪ್ರತಿ ಬಾಟಲ್ ಗೆ 5 ರಿಂದ 12 ರೂ. ವರೆಗೆ ಹೆಚ್ಚಳವಾಗಿದೆ.
ಬ್ರಾಂಡ್‌ಗಳ ಆಧಾರದ ಮೇಲೆ ದರ ಏರಿಕೆಯಾಗಲಿದೆ. ಸಾಮಾನ್ಯ ಬ್ರಾಂಡ್ ಗಳಿಂದ ಪ್ರೀಮಿಯಂ ಬ್ರಾಂಡ್ ಗಳವರೆಗೆ ಎಲ್ಲಾ ಬಗೆಯ ಬಿಯರ್ ಗಳ ದರದಲ್ಲಿ ಹೆಚ್ಚಳವಾಗಲಿದೆ.
ಬಿಯರ್ ಪ್ರಿಯರಿಗೆ ರೇಟ್
1. KF ಪ್ರಿಮಿಯಂ
ಹಿಂದಿನ ದರ ₹ 175
ಹೊಸ ದರ ₹185
2. ಕೆಎಫ್ ಸ್ಟ್ರಾಂಗ್
ಹಿಂದಿನ ದರ ₹ 180
ಹೊಸ ದರ ₹190
3. ಟ್ಯೂಬರ್ಗ್
ಹಿಂದಿನ ದರ ₹ 180
ಹೊಸ ದರ ₹190
4. ಬಡ್ ವೈಸರ್
ಹಿಂದಿನ ದರ ₹230
ಹೊಸ ದರ ₹240
5. ಕಾರ್ಲ್ಸ್ ಬರ್ಗ್
ಹಿಂದಿನ ದರ ₹230
ಹೊಸ ದರ ₹240
6. UB ಸ್ಟ್ರಾಂಗ್
ಹಿಂದಿನ ದರ ₹140
ಹೊಸ ದರ ₹150
7. KF ಸ್ಟಾರ್ಮ್
ಹಿಂದಿನ ದರ ₹175
ಹೊಸ ದರ ₹195
8. ಹೆನಿಕೇನ್
ಹಿಂದಿನ ದರ ₹225
ಹೊಸ ದರ ₹240
9. ಆ್ಯಮ್‌ಸ್ಟೆಲ್
ಹಿಂದಿನ ದರ ₹225
ಹೊಸ ದರ ₹240
10. ಪವರ್ ಕೂಲ್
ಹಿಂದಿನ ದರ ₹110
ಹೊಸ ದರ ₹130
ಮೇ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾಗಿದೆ. ಚುನಾವಣೆ ಗೆದ್ದ ನಂತರ ಜುಲೈ 7 ರಂದು ಮಂಡಿಸಿದ ಮೊದಲ ಬಜೆಟ್ ನಲ್ಲಿ ಸಿದ್ದರಾಮಯ್ಯ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಿತ್ತು. ಫೆಬ್ರವರಿ 16 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದರ ನಂತರ ಇತರ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಬಹುದಾದ ಸಾಧ್ಯತೆಯಿದೆ
ಬಿಯರ್ ಮಾರಾಟದಲ್ಲಿ ದೊಡ್ಡ ಬೆಳವಣಿಗೆಯಾಗಿರುವುದರಿಂದ ಸರ್ಕಾರವು ಅಬಕಾರಿ ಸುಂಕ ಹೆಚ್ಚಳಕ್ಕೆ ಮಾಡಿದೆ ಎನ್ನಲಾಗಿದೆ.