Monday, December 23, 2024

ಡಿ.ಕೆ. ಸುರೇಶ್​ನಾ ತಕ್ಷಣವೇ ಜೈಲಿಗೆ ಹಾಕಬೇಕು : ಶೋಭಾ ಕರಂದ್ಲಾಜೆ

ನವದೆಹಲಿ : ಸಂಸದ ಡಿ.ಕೆ. ಸುರೇಶ್​ ಅವರನ್ನು ತಕ್ಷಣವೇ ಜೈಲಿಗೆ ಹಾಕಬೇಕು ಎಂದು ಡಿಕೆಸು ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ನವರು ಯಾವಾಗಲೂ ದೇಶವನ್ನು ವಿಭಜನೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್​ನವರು ಅವರಿಗೆ ಹೇಳಿಕೆ ಕೊಡಲು ಸಲಹೆ ಕೊಟ್ಟಿರಬೇಕು ಎಂದು ಕುಟುಕಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈ ಎತ್ತಲು ಒಬ್ಬರು ಕೂಡ ಕೇರಳದಲ್ಲಿಲ್ಲ. ಆದರೂ ಅಭಿವೃದ್ಧಿಯಾಗುತ್ತೆ, ದೇಶದ ಎಲ್ಲಾ ಭಾಗಗಳು ಅಭಿವೃದ್ಧಿಯಾಗಬೇಕು. ನಮಗೆ ದಕ್ಷಿಣ ಮತ್ತು ಉತ್ತರ ಅನ್ನುವ ಭೇದಭಾವ ಇಲ್ಲ. ಅಭಿವೃದ್ಧಿ ತಡೆಯಲು ಕಾಂಗ್ರೆಸ್​ಗೆ ಆಗ್ತಿಲ್ಲ. ಹಾಗಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರನ್ನು ತಕ್ಷಣವೇ ಜೈಲಿಗೆ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು.

ಜಾತಿಯ ಪರಿಭಾಷೆಯನ್ನು ಬದಲಾವಣೆ

ದೇಶದ ಹಣಕಾಸು ಸಚಿವರು ಈ ವರ್ಷದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಜಾತಿಯ ಪರಿಭಾಷೆಯನ್ನು ಬದಲಾವಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲಾ ಭಾಗದಲ್ಲಿ ನಾಲ್ಕು ಜಾತಿ ಬಗ್ಗೆ ಮಾತನಾಡುತ್ತಾರೆ. ಎಲ್ಲರಿಗೂ ವಿದ್ಯುತ್, ಮನೆ, ಗ್ಯಾಸ್, ಬ್ಯಾಂಕ್ ಅಕೌಂಟ್ ಬಗ್ಗೆ ಯೋಚನೆ ಮಾಡಿದೆ. ನಾಲ್ಕು ಕೋಟಿ ಜನಕ್ಕೆ ಬೆಳೆ ವಿಮೆ ಕೊಡಲಾಗಿದೆ. ಆಹಾರ ಸಂಸ್ಕರಣಕ್ಕೆ 33 ಸಾವಿರ ಕೋಟಿ ನೀಡಲಾಗಿದೆ ಎಂದು ಹೇಳಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ವಿಶ್ವಾಸವಿದೆ.

ಕೇಂದ್ರ ಸರ್ಕಾರದ ಹಲವು ಯೋಜನೆ ಮುಂದುವರಿಸುವುದು. ಬಡವರ್ಗ, ಮಧ್ಯಮದವರಿಗೆ ಮನೆ ನಿರ್ಮಾಣಕ್ಕೆ ಸಹಾಯ, ಮುಂದಿನ ಐದು ವರ್ಷಗಳಲ್ಲಿ ಮೂರು ಕೋಟಿ ಮಹಿಳೆಯರಿಗೆ ಲಕ್ ಪತಿ ದೀಧಿ ಮಾಡುವಂತದ್ದು. ಪೂರ್ಣ ಕಾಲಿಕ ಬಜೆಟ್ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಬಳಿಕ ಮಾಡ್ತೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ವಿಶ್ವಾಸವಿದೆ. ಕೇವಲ 10 ವರ್ಷಗಳಲ್ಲಿ ನಮ್ಮ ಸರ್ಕಾರ ಅಭಿವೃದ್ಧಿ ಮಾಡಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

RELATED ARTICLES

Related Articles

TRENDING ARTICLES