ಬೆಂಗಳೂರು : ಅನಾಥ ಮಕ್ಕಳಿಗೆ ಗುರುಕುಲ ವಿದ್ಯಾಭ್ಯಾಸ ಹಾಗೂ ಸಂಪೂರ್ಣ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಪವರ್ ಟಿವಿಗೆ ಮಾಹಿತಿ ನೀಡಿರುವ ಶ್ರೀಗಳು, ಸನಾತದ ಧರ್ಮದ ಉಳಿವಿಗಾಗಿ ಸರ್ವರಿಗೂ ಶಿಕ್ಷಣದ ಅಗತ್ಯತೆ ಇದೆ. ಹೀಗಾಗಿ, ನುರಿತ ಅಧ್ಯಾಪಕರುಗಳಿಂದ ಲೌಕಿಕ ಶಿಕ್ಷಣವನ್ನು ಹಾಗೂ ವೇದ ವಿದ್ವಾಂಸರುಗಳಿಂದ ಶಾಸ್ತ್ರಾಧ್ಯಯನವನ್ನು ಕಲಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ಅನಾಥೋ ದೈವರಕ್ಷಕ ಎಂಬಂತೆ ಶ್ರೀಮಠದ ವತಿಯಿಂದ ತಂದೆ ಇಲ್ಲದ, ತಾಯಿ ಇಲ್ಲದ ಅಥವಾ ತಂದೆ-ತಾಯಿ ಇಬ್ಬರೂ ಇಲ್ಲದಂತಹ ಮಕ್ಕಳಿಗೆ ಗುರುಕುಲ ಪದ್ಧತಿಯಂತೆ ಸನಾತನ ಪರಂಪರೆಯ ಶಾಸ್ತ್ರಾಧ್ಯಯನಗಳ ಜೊತೆಗೆ ಪ್ರಾಥಮಿಕ ಹಂತದ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣದ ಸಂಪೂರ್ಣ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗುರುಕುಲ ಪದ್ಧತಿಯಂತೆ ಶಿಕ್ಷಣ
ಗುರುಕುಲ ಪದ್ಧತಿಯಂತೆ ಶಿಕ್ಷಣವನ್ನು ಕಲಿಯಲು ಇಚ್ಛೆಯುಳ್ಳವರು, ಆಸಕ್ತ ಪೋಷಕರು ತಮ್ಮ ಮಕ್ಕಳೊಂದಿಗೆ ಶ್ರೀಮಠವನ್ನು ಸಂಪರ್ಕಿಸುವುದು. ಅಗತ್ಯವಿರುವವರಿಗೆ ಈ ಸಂದೇಶವನ್ನು ತಲುಪಿಸಿ ಅವರ ಶಿಕ್ಷಣಕ್ಕೆ ಮತ್ತು ಮುಂದಿನ ಉಜ್ವಲ ಭವಿಷ್ಯಕ್ಕೆ ನೆರವಾಗಬೇಕು ಎಂದು ಸಿದ್ಧಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಳಿಗೆ ಮೊ.ಸಂ. 6364167671ಗೆ ಸಂಪರ್ಕಿಸಬಹುದಾಗಿದೆ.