Wednesday, January 22, 2025

ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದಡಿ ಕೇಂದ್ರ ಕೆಲಸ ಮಾಡುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಇವರು ಹಣಕಾಸು ಸಚಿವರಾಗಿ 6ನೇ ಸಲ ಬಜೆಟ್ ಮಂಡನೆ ಮಾಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ, ಸರ್ವಾಂಗೀಣ, ಸರ್ವಾಂಗತ, ಸರ್ವಾಪಕ ಮಂತ್ರ ಧೈಯದಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕಥೆ ಸಾಕಷ್ಟು ಬದಲಾಗಿದೆ. ದೇಶದ ಜನರು ಬಹುಮತ ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿಯೊಂದು ಯೋಜನೆಯು ಪ್ರತಿಯೊಬ್ಬರಿಗೂ ತಲುಪಿಸುವ ಸರ್ಕಾರದ ಯೋಜನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಆರ್ಥಿಕ ಪ್ರಗತಿಯನ್ನು ಕಂಡಿದೆ. ದೇಶದ ಭವಿಷ್ಯವ ನಮ್ಮ ಸರ್ಕಾರದ ಗರಿಯಾಗಿದೆ. ದೇಶದ ಜನರ ಅಭಿವೃದ್ಧಿ, ದೇಶದ ಅಭಿವೃದ್ಧಿ ಎನ್ನುವುದನ್ನು ನಾವು ಪಾಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಮಹಿಳೆಯರು ಬಡವರು, ಯುವಕರ, ಅನ್ನಧಾತರ ಅಭರವೃದ್ಧಿ ನಮ್ಮ ಗುರಿಯಾಗಿದ್ದು, ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಸಾಮಾಜಿಕ ನ್ಯಾಯ ಎನ್ನುವುದು ಕೇಲವ ಘೋಷಣೆಯಲ್ಲ ಇದು ಅಭಿವೃದ್ಧಿಯಾಗಿದೆ. ಜನರ ಅಭರವ್ಯದ್ಧಿಯೇ ದೇಶದ ಅಭ್ಯವೃದ್ಧಿಯಾಗಿರುತ್ತದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಜೆಟ್ ಆಗಿದೆ.

ರೈತರಿಗೆ ಕಾಲಕಾಲಕ್ಕೆ ತಕ್ಕಂತೆ ಬೆಂಬಲ ಬೆಲೆ ನೀಡಿದ್ದೇವೆ. 80 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಲಾಗಿದೆ. 10 ವರ್ಷದಲ್ಲಿ 25 ಕೋಟಿ ಬಡತನ ಮುಕ್ತವಾಗಿದೆ. ಬಡವರ ಅಭಿವೃದ್ಧಿ ಸರ್ಕಾರದ ಅಭಿವೃದ್ಧಿಯಾಗಿದೆ. ಯುವಕರನ್ನು ಸಶಕ್ತಕರಣಗೊಳಿಸುವುದು ಸಮ್ಮ ಸರ್ಕಾರದ ಧೈಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ.

ಮಹಿಳೆಯರ ಹಿತ ರಕ್ಷಣೆಯಿಂದ ತ್ರಿಬಲ್ ತಲಾಖ್ ರದ್ದು ಮಾಡಲಾಗಿದೆ. ದೇಶದಲ್ಲಿ ಮಹಿಳಾ ಉದ್ಯಮಿಗಳ ಪ್ರಾಮಾನ ಗಣನೀಯವಾಗಿ ಹೆಚ್ಚಳವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಜೆಟ್ ಆಗಿದೆ ಎಂದಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತದ ಆರ್ಥಿಕತೆಯು ಶೇ.7.3 ಬೆಳವಣಿಗೆ ನಿರೀಕ್ಷಿಸಲಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥಿಕತೆಯಾಗಿದೆ. ಭಾರತದ ಆರ್ಥಿಕತೆಯು 2022-23ರಲ್ಲಿ ಶೇ.7.2 ಮತ್ತು ಬೆಳವಣಿಗೆ ಕಂಡಿದೆ.

RELATED ARTICLES

Related Articles

TRENDING ARTICLES