Monday, December 23, 2024

ನಾನು ಏನು ಮಾಡಿದರೂ, ಅದಕ್ಕೆ ದೇವರಕೊಂಡ ಕೊಡುಗೆ ಇದೆ : ರಶ್ಮಿಕಾ ಮಂದಣ್ಣ

ಬೆಂಗಳೂರು : ಈಗ ನಾನು ಜೀವನದಲ್ಲಿ ಏನು ಮಾಡಿದರೂ, ಅದಕ್ಕೆ ನಟ ವಿಜಯ್ ದೇವರಕೊಂಡ ಅವರ ಕೊಡುಗೆ ಇದೆ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ಅವರ ಗೆಳೆತನದ ಬಗ್ಗೆ ಅವರು ಮಾತನಾಡಿದ್ದಾರೆ. ನಾನು ಯಾವ ಕೆಲಸ ಮಾಡಿದರೂ ಅವರ ಸಲಹೆಯನ್ನು ಪಡೆದುಕೊಳ್ಳುತ್ತೇನೆ. ಅವರ ಅಭಿಪ್ರಾಯದಂತೆ ನಾನು ಅದನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯ್ ಎಲ್ಲದಕ್ಕೂ ಹೌದು ಎಂದು ಒಪ್ಪುವ ವ್ಯಕ್ತಿಯಲ್ಲ. ಅವರ ಅಭಿಪ್ರಾಯ ವಿಚಾರದ ಮೇಲಿರುತ್ತದೆ. ಇದು ಒಳ್ಳೆಯದು, ಒಳ್ಳೆಯದಲ್ಲ. ನಾನು ಏನು ಯೋಚಿಸುತ್ತೇನೋ..? ಏನು ಯೋಚಿಸುವುದಿಲ್ಲವೋ..? ಎಲ್ಲದಕ್ಕೂ ಅವರು ನನಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ರಾಮನ ಹೆಸರಲ್ಲಿ ರಾಜಕೀಯ ನಡೆಯುತ್ತಿದೆ, ಇದನ್ನು ನೋಡುತ್ತಾ ಕೂರಬೇಕೆ? : ವಿವಾದದ ಕಿಡಿ ಎಬ್ಬಿಸಿದ ಶ್ರುತಿ ಹರಿಹರನ್

ನಾನು ನಿಜವಾಗಿಯೂ ಗೌರವಿಸುವ ವ್ಯಕ್ತಿ

ವಿಜಯ್ ದೇವರಕೊಂಡ ಅವರು ನನ್ನ ಇಡೀ ಜೀವನದಲ್ಲಿ ಬೇರೆಯವರಿಗಿಂತ ವೈಯಕ್ತಿಕವಾಗಿ ಹೆಚ್ಚಾಗಿ ನನ್ನನ್ನು ಬೆಂಬಲಿಸಿದ್ದಾರೆ. ಅವರು ನಾನು ನಿಜವಾಗಿಯೂ ಗೌರವಿಸುವ ವ್ಯಕ್ತಿ ಅವರು ಎಂದು ಭಾವಿಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES