Monday, December 23, 2024

ಇದು ಬ್ರಿಟಿಷ್ ತಳಿ ಇರಬಹುದು : ರೇಣುಕಾಚಾರ್ಯ ಕಿಡಿ

ಬೆಂಗಳೂರು : ಸಂಸದ ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ವಿಚಾರ ಕುರಿತು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ನವರು ದೇಶದಲ್ಲಿ ಭಾರತ ಮಾತೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

ವಂಶ ವೃಕ್ಷ ತೆಗೆದು ನೋಡಿದರೆ ಇದು ಬ್ರಿಟಿಷ್ ತಳಿ ಇರಬಹುದು. ಭಾರತ ದೇಶ ವಿಭಜನೆ ಮಾಡುವ ಶಕ್ತಿ ಕಾಂಗ್ರೆಸ್ ನವರಿಗೆ ಇಲ್ಲ. ಹಿಂದೆ ಬಾಂಗ್ಲಾದೇಶ ಬಿಟ್ಟು ಕೊಟ್ಟಿವರು ಇವರು. ಡಿ.ಕೆ ಸುರೇಶ್ ಅವರು ದಕ್ಷಿಣ ಭಾರತ ಪ್ರತ್ಯೇಕ ಆಗಬೇಕು ಎಂದು ಹೇಳಿದ್ದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ರಾಮ, ಹನುಮನ ಶಾಪ ತಟ್ಟಲಿದೆ

ಕಾಂಗ್ರೆಸ್​ನವರು ವಿಕೃತ ಮನಸ್ಸಿನವರು. ಸದಾ ಒಂದಿಲ್ಲೊಂದು ವಿವಾದದಲ್ಲಿ ಇರುತ್ತಾರೆ. ಇತ್ತೀಚೆಗೆ ಮಾಗಡಿ ಶಾಸಕ ಬಾಲಕೃಷ್ಣ ಅವರು ಉಚಿತ ಗ್ಯಾರಂಟಿಗಳನ್ನು ನಿಲ್ಲಿಸುವ ಮಾತನಾಡಿದ್ದಾರೆ. ತಾಕತ್ತಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸಲಿ. ಮತ್ತೊಂದೆಡೆ, ಬಿ.ಕೆ. ಹರಿಪ್ರಸಾದ್ ಅವರು ಗೋಧ್ರಾ ಮಾದರಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್​ನವರಿಗೆ ರಾಮ, ಕರಸೇವಕರು ಹಾಗೂ ಹನುಮನ ಶಾಪ ತಟ್ಟಲಿದೆ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES