ಬೆಂಗಳೂರು : ಮಾಜಿ ಸಚಿವ ಬಿ. ಶಿವರಾಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದು ಮೊದಲು ಬರೆಯಿರಿ. ಆ ಮೇಲೆ ಶಿವರಾಂ ಹೇಳಿದ್ದನ್ನ ಬರೆಯಿರಿ ಎಂದು ಗರಂ ಆಗಿದ್ದಾರೆ.
ಯತ್ನಾಳ್ ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದನ್ನ ನೆನಪಿಸಿ ಹೇಳಿದ್ರು. ತಮ್ಮ ಸರ್ಕಾರದ ಮೇಲಿನ ಆರೋಪದ ಬಗ್ಗೆ ಕೇಳಿದಾಗ, ಎರಡು ಒಟ್ಟಿಗೆ ಸೇರಿಸಿ ಬರೆಯಿರಿ ಎಂದು ಸಿದ್ದರಾಮಯ್ಯ ಸಿಡಿಮಿಡಿಗೊಂಡು ಉತ್ತರಿಸಿದ್ದಾರೆ.
ಸಂಸದ ಡಿ.ಕೆ. ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇಶದ ಸಾರ್ವಭೌಮತೆ ಇರಬೇಕು. ಒತ್ತಾಯ, ಮನವಿ ಮಾಡೋದು ಬೇರೆ. ಫೆಡರಲಿಸಂ ನಾವು ಒಪ್ಪಿಕೊಂಡಿದ್ದೇವೆ. ಆದ್ರೆ ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಬರ್ತಾ ಇಲ್ಲ. 4 ಲಕ್ಷ ಕೋಟಿಗೂ ಅಧಿಕ ತೆರಿಗೆ ನಮ್ಮರಾಜ್ಯದಿಂದ ಕೇಂದ್ರ ವಸೂಲಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಫಸ್ಟ್, ನೆಕ್ಸ್ಟ್ ನಮ್ಮ ಕರ್ನಾಟಕನೇ ಇರೋದು. ಆದ್ರೆ ,ನಮ್ಮ ತೆರಿಗೆ ಸಂಗ್ರಹಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಅನುದಾನ ಕೊಡ್ತಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.