Monday, December 23, 2024

ನೀರಿನ ಟ್ಯಾಂಕ್ ಕುಸಿದು ಬಿದ್ದು ಮಗಳ ಎದುರೇ ತಾಯಿ ಸಾವು

ಉಡುಪಿ : ಕಾರ್ಕಳ ನಂದಳಿಕೆ ಗ್ರಾಮದ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ತಡರಾತ್ರಿ ನೀರಿನ ಟ್ಯಾಂಕ್ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ್ದು, ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಶೀಲತಾ (50) ಮೃತ ಮಹಿಳೆ. ಘಟನೆಯಲ್ಲಿ ಮಗಳು ಪೂಜಾ (26) ಗಂಭಿರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂದಳಿಕೆ ಗ್ರಾಮದ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಮಾರಿಪೂಜೆಗೆ ಶ್ರೀಲತಾ ಹಾಗೂ ಅವರ ಮಗಳು ಪೂಜಾ ಹೋಗಿದ್ದರು. ರಾತ್ರಿ ದೇವಸ್ಥಾನದಲ್ಲಿ ಊಟ ಮಾಡಿ ಪ್ಲೇಟನ್ನು ದೇವಸ್ಥಾನದ ಹಿಂಭಾಗದ ನೀರಿನ ಟ್ಯಾಂಕ್‌ನ ಬಳಿ ಇಡಲು ಹೋದಾಗ, ದೇವಸ್ಥಾನದ ಹಿಂಭಾಗದಲ್ಲಿದ್ದ ನೀರಿನ ಟ್ಯಾಂಕ್ ಅಕಸ್ಮಿಕವಾಗಿ ಕುಸಿದು ಶ್ರೀಲತಾ ಮತ್ತು ಪೂಜಾರ ಮೈಮೇಲೆ ಬಿದ್ದಿದೆ.

ಘಟನೆಯಲ್ಲಿ ಶ್ರೀಲತಾ ಹಾಗೂ ಪೂಜಾ ತೀವ್ರ ಗಾಯಗೊಂಡಿದ್ದಾರೆ. ಕೂಡಲೇ ಮಾಜಿ ಸಮಾಜ ಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ 108 ಆಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಶೀಲತಾ ಮೃತಪಟ್ಟಿದ್ದಾರೆ. ಇನ್ನು, ಪುತ್ರಿ ಪೂಜಾರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮೃತ ಶ್ರೀಲತಾ ಬೆಲ್ಮಣ್ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES