ನವದೆಹಲಿ: ಕೇಂದ್ರ ಸರ್ಕಾರ 2024-25 ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಲು ಸಜ್ಜಾಗಿದ್ದು,ನಾಳೆ ಬೆಳಿಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 6ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.
ಎಪ್ರಿಲ್- ಮೇ ನಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಈಗ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಚುನಾವಣೆ ನಂತರ ಪೂರ್ಣ ಸರ್ಕಾರ ರೂಪುಗೊಂಡ ಬಳಿಕ ಸಂಪೂರ್ಣ ಬಜೆಟ್ ಮಂಡನೆಯಾಗಲಿದೆ.
ಇದನ್ನೂ ಓದಿ: ಮೈಸೂರಿನ ಅಂಬೇಡ್ಕರ್ ಪಾರ್ಕ್ನಲ್ಲಿ ಟಿಪ್ಪು ಬಾವುಟ ಹಾರಾಟ
ಬಜೆಟ್ ಮಂಡನೆ ಸದನದಿಂದ ಸಂಸದ್ ಟಿವಿ ಮತ್ತು ಡಿಡಿ ನ್ಯೂಸ್‌ನಲ್ಲಿ ನೇರಪ್ರಸಾರವಾಗಲಿದೆ. ಪ್ರೆಸ್ ಇನ್ನರ್ಮೇಷನ್ ಬ್ಯೂರೊ (ಪಿಐಬಿ) ಕೂಡ ಯುಟ್ಯೂಬ್ ಮತ್ತು ವೆಬ್‌ಸೈಟ್‌ನಲ್ಲಿ ನೇರಪ್ರಸಾರ ಇರಲಿದೆ. ಸದನದಲ್ಲಿ ಬಜೆಟ್ ಮಂಡನೆ ಮುಗಿದ ಬಳಿಕ ‘ಯೂನಿಯನ್ ಬಜೆಟ್’ ಮೊಬೈಲ್ ಆ್ಯಪ್‌ನಲ್ಲಿ ಬಜೆಟ್ ಪ್ರತಿಯನ್ನು ಪಡೆಯಬಹುದು ಅಥವಾ ‘ಯೂನಿಯನ್ ಬಜೆಟ್ ವೆಬ್‌ಸೈಟ್’ನಲ್ಲಿಯೂ ಸಿಗಲಿದೆ.