Thursday, January 23, 2025

Paytmಗೆ ಬಿಗ್ ಶಾಕ್.. ಫೆ.29ರ ಬಳಿಕ ವಹಿವಾಟು ಸಾಧ್ಯವಿಲ್ಲ ಎಂದ RBI

ಬೆಂಗಳೂರು : Paytm ಪೇಮೆಂಟ್ಸ್​ ಬ್ಯಾಂಕ್​ಗೆ ಆರ್​ಬಿಐ ಶಾಕ್ ನೀಡಿದೆ. ಹೊಸ ಗ್ರಾಹಕರನ್ನು ದಾಖಲು ಮಾಡಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆದೇಶಿಸಿದೆ.

ಫೆಬ್ರವರಿ 29ರ ನಂತರ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್, ವ್ಯಾಲೆಟ್ ಮತ್ತು ಫಾಸ್ಟ್‌ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್‌ಗೆ ಆರ್‌ಬಿಐ ನಿರ್ಬಂಧಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ರಿಸರ್ವ್ ಬ್ಯಾಂಕ್ ಸಮಗ್ರ ವ್ಯವಸ್ಥೆಯ ಲೆಕ್ಕಪರಿಶೋಧಕರ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.

ಠೇವಣಿ, ಕ್ರೆಡಿಟ್ ವ್ಯವಹಾರ ಅಥವಾ ಟಾಪ್ ಅಪ್‌ಗಳನ್ನು ಯಾವುದೇ ಗ್ರಾಹಕ ಖಾತೆಗಳಿಂದ ಸ್ವೀಕರಿಸುವಂತಿಲ್ಲ. ಜೊತೆಗೆ ಈ ಪ್ರಿಪೇಯ್ಡ್, ವಾಲೆಟ್, ಪಾಸ್ಪೆಟ್ಯಾಗ್, ಎನ್‌ಸಿಎಮ್‌ಸಿ ಕಾರ್ಡ್‌ಗಳನ್ನೂ ನೀಡುವಂತಿಲ್ಲ. ಇದನ್ನು ಹೊರತುಪಡಿಸಿ ಬಡ್ಡಿ ಹಣ, ಮರುಪಾವತಿಯನ್ನು ಯಾವುದೇ ಸಮಯದಲ್ಲಿ ಮಾಡಬಹುದು ಎಂದು ತಿಳಿಸಿದೆ.

ಫೆ.29ರಿಂದ ಗ್ರಾಹಕರಿಗೆ ಮರುಪಾವತಿ ಪ್ರಾರಂಭ

ಸದ್ಯ ಖಾತೆಯಲ್ಲಿರುವ ಹಣವನ್ನು ಗ್ರಾಹಕರಿಗೆ ಬಳಸಲು ಯಾವುದೇ ತೊಂದರೆ ಇಲ್ಲ. ಫೆ.29ರಿಂದ ಗ್ರಾಹಕರಿಗೆ ಮರುಪಾವತಿ ಪ್ರಾರಂಭವಾಗಲಿದೆ. ಮಾರ್ಚ್​ 15ರೊಳಗೆ ಪೂರ್ಣಗೊಳಿಸಬೇಕು ಎಂದು ಆರ್​ಬಿಐ ಹೇಳಿದೆ.

RELATED ARTICLES

Related Articles

TRENDING ARTICLES