Monday, December 23, 2024

ಕಾಂಗ್ರೆಸ್​ಗೆ ಒಂದೇ ಒಂದು ಸೀಟೂ ಬಿಟ್ಟುಕೊಡಲ್ಲ : ಮಮತಾ ಬ್ಯಾನರ್ಜಿ

ಕೋಲ್ಕೊತ್ತಾ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಒಂದೇ ಒಂದು ಸ್ಥಾನವನ್ನು ಬಿಟ್ಟುಕೊಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕೊತ್ತಾದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್​ ನಾಯಕರು ಒಂದು ಕಡೆ ಮಾರ್ಕ್ಸ್​ ವಾದಿ ಕಮ್ಯೂನಿಷ್ಟರ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಬಿಜೆಪಿಯವರ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾಗಿ, ದ್ವಂದ್ವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಮಿತ್ರತ್ವಕ್ಕೆ ಯೋಗ್ಯವಲ್ಲ ಎಂದು ಕುಟುಕಿದ್ದಾರೆ.

ಕಮ್ಯೂನಿಷ್ಟರು ತೃಣ ಮೂಲ ಕಾಂಗ್ರೆಸ್​ಗೆ ಏನು ಮಾಡಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ನೀವು ಅವರ ಮೈತ್ರಿಯನ್ನು ಬಿಟ್ಟು ಬಂದರೆ, ಮಾಲ್ಡಾ ಸೇರಿದಂತೆ ಎರಡು ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ದ. ಒಪ್ಪದಿದ್ದರೆ ನಿಮಗೆ ಒಂದೇ ಒಂದು ಸ್ಥಾನವನ್ನೂ ಬಿಟ್ಟುಕೊಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್​ಗೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸಿಪಿಐಎಂ ಜೊತೆಗಿನ ಮೈತ್ರಿ ಬಿಟ್ಟು ಬನ್ನಿ

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​ನ ಒಬ್ಬ ಶಾಸಕನೂ ಇಲ್ಲ. ಹೀಗಿದ್ದರೂ ಎರಡು ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್​ಗೆ ಬಿಟ್ಟುಕೊಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದರು. ಆದರೆ, ಈ ಪ್ರಸ್ತಾವನೆಯನ್ನು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ತಿರಸ್ಕರಿಸಿದ್ದರು. ಇದರಿಂದ ಕುಪಿತರಾದ ದೀದಿ, ಫಸ್ಟ್​ ನೀವು ಸಿಪಿಐಎಂ ಜೊತೆಗಿನ ಮೈತ್ರಿ ಬಿಟ್ಟು ಬನ್ನಿ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES