Sunday, December 22, 2024

ಬಿಜೆಪಿಗೆ ಕಾರ್ಯಕರ್ತರೇ ಎದುರಾಳಿ : ‘ವರಾಹಿ ಸರ್ವೆ’ಯಲ್ಲಿ ಹಿತಶತ್ರುಗಳ ಕಾಟ ಬಹಿರಂಗ

ಬೆಂಗಳೂರು : ‘ಲೋಕಾ’ಸಮರಕ್ಕೆ ಸಜ್ಜಾಗುತ್ತಿರುವ ಬಿಜೆಪಿಗೆ ಅಡೆ-ತಡೆಗಳು ಸಾಕಷ್ಟು ಇವೆ. ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ್ದ ಕೆಲ ಯಡವಟ್ಟುಗಳು ಇದೀಗ ಸರ್ಕಾರದ ಮೇಲೆ ಮುಗಿಬಿದ್ದಿದೆ. ಸದ್ಯ, ಬಿಜೆಪಿಗೆ ಕಾಂಗ್ರೆಸ್‌ಗಿಂತ ದೊಡ್ಡ ಎದುರಾಳಿ ಸ್ವಪಕ್ಷದಲ್ಲಿಯೇ ಇದ್ದಾರೆ. ಸರ್ವೆವೊಂದರಲ್ಲಿ ಈ ಕುರಿತು ಸ್ಫೋಟಕ ವರದಿ ಹೊರಬಂದಿದೆ.

ಹೌದು, ವಾರಾಹಿ ಸರ್ವೆ ಪ್ರಕಾರ ಈ ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರನ್ನ ಕಡೆಗಣನೆ ಮಾಡಿದ್ದರು. ಇದೇ ವಿಚಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೂ ಕಾರಣವಾಗಿತ್ತು. ಇದೀಗ ಅಂತಹದೇ ಪರಿಸ್ಥಿತಿ ಎದುರಾಗುವ ಸಾಧ್ಯತೆ‌ ಇದೆ. ಯಾಕೆಂದರೆ, ಬಿಜೆಪಿ ಕಾರ್ಯಕರ್ತರ ಕೋಪತಾಪ ಇನ್ನು ಕಡಿಮೆಯಾಗಿಲ್ಲ. ಹೀಗಾಗಿ, ಅವರ ಜೊತೆ ಉತ್ತಮ ಸಂಬಂಧ ವೃದ್ದಿಸಿಕೊಳ್ಳುವಂತೆ ಹೈಕಮಾಂಡ್ ಸೂಚಿಸಿದೆ.

ಈ ಬಗ್ಗೆ ಸಂಸದರಿಗೆ ಹಾಗೂ ಲೋಕಸಭಾ ಅಭ್ಯರ್ಥಿಗಳಿಗೆ ಬಿಜೆಪಿ ಹೈಕಮಾಂಡ್ ಸೂಚನೆ ಕೊಟ್ಟಿದೆ. ಕಳೆದ ವಿಧಾನಸಭೆಯಲ್ಲಿ ನಾಯಕರು ಕಾರ್ಯಕರ್ತರಿಂದ ಅಂತರ ಕಾಯ್ದುಕೊಂಡಿದ್ದರು. ಅದು ಬಿಜೆಪಿ ನಾಯಕರು ಸೋಲಿಗೂ ಕಾರಣವಾಗಿತ್ತು. ಇದೀಗ ಕಾರ್ಯಕರ್ತರ ಅಸಮಾಧಾನ ಲೋಕಸಭಾ ಚುನಾವಣೆಯಲ್ಲೂ ಪರಿಣಾಮ ಬೀರಬಹುದು. ವರಾಹಿ ವರದಿ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ‌ ಕಾರ್ಯಕರ್ತರ ಬೆಂಬಿದ್ದಿದ್ದಾರೆ.

ಈ ಸುದ್ದಿ ಓದಿದ್ದೀರಾ? : ವೇದಿಕೆಯಲ್ಲೇ ವಿಜಯೇಂದ್ರ ಕಾಲಿಗೆ ಬಿದ್ದ ಮಾಜಿ ಸಚಿವ ಪ್ರಭು ಚೌಹಾಣ್

ಮೋದಿ ಹೆಸರಲ್ಲಿ ಗೆಲ್ಲುವ ಭ್ರಮೆ ಬೇಡ

ಇನ್ನು, ರಾಜ್ಯ ಬಿಜೆಪಿ ನಾಯಕರು ಕಾರ್ಯಕರ್ತರ ಮಧ್ಯೆ ಇರಬೇಕು, ಕಾರ್ಯಕರ್ತರು ಕರೆಮಾಡಿದ್ರೆ ಸ್ಪಂದಿಸಬೇಕು. ನೀವು ಒಬ್ಬ ಕಾರ್ಯಕರ್ತನಿಗೆ ಸ್ಪಂದಿಸದೆ ಹೋದ್ರೆ ಆತ 10 ಜನಕ್ಕೆ ಹೇಳುತ್ತಾನೆ. ಇಷ್ಟಲ್ಲದೇ, ಮೋದಿ ಹೆಸರಲ್ಲಿ ಗೆಲ್ಲುವ ಭ್ರಮೆ ಬೇಡವೇ ಬೇಡ ಎಂದು ರಾಜ್ಯ ನಾಯಕರಿಗೆ ಎಚ್ಚರಿಸಿದ್ದಾರೆ. ಇದರಂತೆ ಹೀಗೆ ಅನೇಕ ಸಂದೇಶಗಳನ್ನ ಬಿಜೆಪಿ ಹೈಕಮಾಂಡ್ ನೀಡಿದ್ದು, ಇದೀಗ ರಾಜ್ಯ ನಾಯಕರು ಕಾರ್ಯಕರ್ತರ ಮನವೊಲಿಕೆಗೆ ನಿಂತಿದ್ದಾರೆ.

RELATED ARTICLES

Related Articles

TRENDING ARTICLES