ಬೆಂಗಳೂರು: ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಜನರಿಗೆ ಭರವೆಸಗಳನ್ನು ನೀಡಿದ್ದಾರೆ ಅದೆಲ್ಲಾ ಈಗ ಬೋಗಸ್ ಭರವಸೆಗಳಾಗಿವೆ ಎಂದು ಟೀಕಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಕಸ್ಮಕವಾಗಿ ಅಧಿಕಾರಕ್ಕೆ ಬಂದಿದ್ದಾರೆ.ಇವರು ಚುನಾವಣೆಗೋಸ್ಕರ ಕೇವಲ ಐದು ಗ್ಯಾರಂಟಿ ಭರವಸೆಗಳನ್ನು ಮಾತ್ರ ನೀಡಿಲ್ಲ ಸುಮಾರು ಭರವಸೆಗಳನ್ನೂ ನೀಡಿದ್ದಾರೆ.
ಕಾಂಗ್ರೇಸ್ ಸರ್ಕಾರ 10 ಅಕ್ಕಿಯನ್ನು ಜನರಿಗೆ ನೀಡುತ್ತೇವೆ ಎಂದು ಹೇಳಿದ್ದರು.ಆದರೆ ಕೇವಲ 3ಕೆ.ಜಿ ಅಕ್ಕಿ ಹಾಗೂ 174ರೂಪಾಯಿಗಳನ್ನು ನೀಡಿದ್ದಾರೆ.ಗೃಹಲಕ್ಷ್ಮೀಗೆ ಶೇ 60ರಷ್ಟು ಮಹಿಳೆಯರಿಗೆ ಯೋಜನೆಯ ಸದುಪಯೋಗವೇ ಆಗಿಲ್ಲ.ಯುವನಿಧಿ ಯೋಜನೆಯಿಂದ 5 ಲಕ್ಷ ಯುವಕರಿಗೆ ನೀಡುತ್ತೇವೆ ಎಂದು ಹೇಳಿದ್ದರು.ಆದರೆ ಕೇವಲ 3,5000 ಯುವಕರಿಂದ ಮಾತ್ರ ನೊಂದಣಿಯಾಗಿದೆ.ಈ ಯೋಜನೆಯೂ ಕೂಡ ಫೇಲ್ ಆಗಿದೆ.
ಇನ್ನೂ ಶಕ್ತಿ ಯೋಜನೆ ಜಾರಿ ಮಾಡಿದ್ರು ಆದರೆ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ನಗರ ಸಭೆಗಳಲ್ಲಿ ಮಾತ್ರ ಸರ್ಕಾರಿ ಬಸ್ ಓಡಾಡುತ್ತೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ಗಳೇ ಬರುವುದಿಲ್ಲ.ಇವರು ಹೆಚ್ಚುವರಿ ಬಸ್ ಬಿಡಬೇಕಿತ್ತುಆದರೆ ಬಿಟ್ಟಿಲ್ಲ. ಗೃಹಜ್ಯೋತಿನೂ ಅಷ್ಟೇ ಫೇಲ್ಯೂರ್ ಆಗಿದೆ.
ನಾವು ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ ಎಲ್ಲಿ ನಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.