ಬೆಂಗಳೂರು: ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗಕ್ಕೆ ಬಣ್ಣ ಹಂಚಿ ಒರೋಬ್ಬರಿ 28 ವರುಷಗಳು ಉರುಳಿವೆ ಎಂದು ಬಾದ್ ಷಾ ಕಿಚ್ಚ ಸುದೀಪ್ ಭಾವುಕರಾಗಿ ಸಿನಿ ಜರ್ನಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಸುದೀಪ್ವರ ತಂದೆ ಸಂಜೀವ್ ಅವರು ಹೋಟೆಲ್ ಉದ್ಯಮ ಹೊಂದಿದ್ದರು. ಗಾಂಧಿ ನಗರದಲ್ಲಿ ಈ ಹೋಟೆಲ್ ಇತ್ತು. ಹೀಗಾಗಿ, ಚಿತ್ರರಂಗದವರ ಒಡನಾಟ ಬೆಳೆಯಿತು. ಸುದೀಪ್ಗೂ ಸಿನಿಮಾಗೆ ಕಾಲಿಡಬೇಕು ಎನ್ನುವ ಕನಸು ಹುಟ್ಟಿದ್ದು ಅಲ್ಲಿಯೇ..
Seems like just a few years bk that I stepped onto the floor of #Bramha at Kanteerava studio, with AmbrishMama, to face the camera. It's already 28 years!!!!!
Feeling humbled. I just have love,respect and a lot of gratitude to each and everyone for this priceless gift. 🤗♥️ pic.twitter.com/Un6PsDN2Qk— Kichcha Sudeepa (@KicchaSudeep) January 31, 2024
‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ
‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಅಂಬರೀಷ್ ಅವರು ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಸುದೀಪ್ ಈ ಚಿತ್ರಕ್ಕಾಗಿ ಕ್ಯಾಮೆರಾ ಎದುರುಸಿದ ದಿನವನ್ನು ಚಿತ್ರರಂಗದಲ್ಲಿ ಮೊದಲ ದಿನ ಎಂದು ಪರಿಗಣಿಸಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ (ಜನವರಿ 31) 28 ವರ್ಷಗಳು ಕಳೆದಿವೆ ಎಂದು ಮೊದಲ ದಿನ ಕ್ಯಾಮೆರಾ ಎದುರಿಸಿದ್ದನ್ನು ಸುದೀಪ್ ನೆನಪಿಸಿಕೊಂಡಿದ್ದಾರೆ.
ಎಲ್ಲರಿಗೂ ಧನ್ಯವಾದ
ನಾನು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರೊಂದಿಗೆ ಬ್ರಹ್ಮ ಚಿತ್ರದ ಶೂಟಿಂಗ್ ಆರಂಭಿಸಿದೆ. ಕೆಲವೇ ವರ್ಷಗಳ ಹಿಂದೆ ಇದು ನಡೆದಿದೆ ಎಂಬ ಭಾವನೆ. ಆದರೆ, ಈಗಾಗಲೇ ಇದಕ್ಕೆ 28 ವರ್ಷಗಳು ತುಂಬಿವೆ. ಎಲ್ಲರಿಗೂ ಧನ್ಯವಾದ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ
‘ಮನರಂಜನಾ ಕ್ಷೇತ್ರದಲ್ಲಿ 28 ವರ್ಷಗಳು ನನ್ನ ಜೀವನದ ಅತ್ಯಂತ ಸುಂದರ ಭಾಗವಾಗಿದೆ. ಈ ಸಾಟಿಯಿಲ್ಲದ ಉಡುಗೊರೆಗಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಪೋಷಕರು, ಕುಟುಂಬ, ತಂತ್ರಜ್ಞರು, ನಿರ್ಮಾಪಕರು, ಬರಹಗಾರರು, ನನ್ನ ಸಹ-ನಟರು, ಮಾಧ್ಯಮ, ಮನರಂಜನಾ ಚಾನೆಲ್‌ಗಳು, ವಿತರಕರು, ಪ್ರದರ್ಶಕರು ಹಾಗೂ ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.
ಅಭಿಮಾನಿಗಳಿ್ಗೆ ಪ್ರೀತಿಯ ಧನ್ಯವಾದ
‘ನಾನು ಜೀವನದಲ್ಲಿ ಗಳಿಸಿದ ಅತ್ಯಂತ ಅಮೂಲ್ಯ ವಿಚಾರ ಎಂದರೆ ಅದು ಫ್ಯಾನ್ಸ್. ಅವರಿಗೂ ಧನ್ಯವಾದ. ಇದು ಏರಿಳಿತದ ಪ್ರಯಾಣ. ನಾನು ಪ್ರತಿ ಕ್ಷಣವನ್ನು ಆನಂದಿಸಿದೆ. ನಾನು ದೋಷರಹಿತನಲ್ಲ, ಪರಿಪೂರ್ಣನಲ್ಲ, ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ. ಅವಕಾಶಗಳು ಬಂದಾಗ ನನ್ನ ಕೈಲಾಗಿದ್ದನ್ನು ನೀಡಿದ್ದೇನೆ. ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.