ಬೆಂಗಳೂರು : ಅಂಡರ್-19 ವಿಶ್ವಕಪ್ನ ಸೂಪರ್ ಸಿಕ್ಸ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಕಿರಿಯರ ತಂಡ ಬೃಹತ್ ಟಾರ್ಗೆಟ್ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕಿವೀಸ್ ನಾಯಕನ ಲೆಕ್ಕಾಚಾರವನ್ನು ಉಲ್ಟಾ ಮಾಡಿತು. ಮುಶೀರ್ ಖಾನ್ ಸಿಡಿಲಬ್ಬರದ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 295 ರನ್ ಗಳಿಸಿತು.
ಭಾರತದ ಪರ ಮುಶೀರ್ ಖಾನ್ (131) ಆಕರ್ಷಕ ಶತಕ ಸಿಡಿಸಿದರೆ, ಆದರ್ಶ್ ಸಿಂಗ್ 52, ನಾಯಕ ಉದಯ್ ಸಹರನ್ 34, ಅವನೀಶ್ 17, ಸಚಿನ್ 15 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮೇಸನ್ ಕ್ಲಾರ್ಕ್ 4 ವಿಕೆಟ್ ಪಡೆದರು.
ಲೀಗ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು ಮಣಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧವೂ 201 ರನ್ಗಳಿಂದ ಗೆಲುವು ಸಾಧಿಸಿತ್ತು. ಲೀಗ್ನ ಕೊನೆಯ ಪಂದ್ಯದಲ್ಲೂ ಅಮೆರಿಕ ವಿರುದ್ಧ 201 ರನ್ಗಳ ಬೃಹತ್ ಗೆಲುವು ದಾಖಲಿಸಿ, 3 ಗೆಲುವಿನೊಂದಿಗೆ ಅಗ್ರಸ್ಥಾನ ಅಲಂಕರಿಸಿತ್ತು. ಇದೀಗ, ಭಾರತ ಯುವಪಡೆ ಕಿವೀಸ್ ಪಡೆಯನ್ನು ಬಗ್ಗುಬಡಿಯುವ ತವಕದಲ್ಲಿದೆ.
Innings Break!
A splendid 1⃣3⃣1⃣ from Musheer Khan propels #TeamIndia to 295/8 👌👌
Over to our bowlers 💪
Scorecard ▶️ https://t.co/UdOH802Y4s#BoysInBlue | #INDvNZ pic.twitter.com/eC5SOg7CEh
— BCCI (@BCCI) January 30, 2024