Sunday, December 22, 2024

ಗಂಡ ಹೆಂಡತಿ ಜಗಳ ಪತ್ನಿ ಸಾವಿನಲ್ಲಿ ಅಂತ್ಯ : ಪುಟ್ಟ ಮಗು ಅನಾಥ

ತುಮಕೂರು : ಕ್ಷುಲ್ಲಕ ಕಾರಣಕ್ಕೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ವಿವಾಹಿತ ಮಹಿಳೆಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತುಮಕೂರು ನಗರದ ಪಿ.ಎಚ್ ಕಾಲೋನಿಯ 12ನೇ ಕ್ರಾಸ್​ನಲ್ಲಿ ಘಟನೆ ನಡೆದಿದೆ. ಖಾಸಿನಾ ಮೃತ ವಿವಾಹಿತ ಮಹಿಳೆ. ಮೃತ ಖಾಸಿನಾಗೆ ಒಂದುವರೆ ವರ್ಷದ ಪುಟ್ಟ ಮಗುವಿದ್ದು, ಇದೀಗ ತಾಯಿ ಇಲ್ಲದೆ ಅನಾಥವಾಗಿದೆ.

ಕಳೆದ ಎರಡು ವರ್ಷದ ಹಿಂದೆ ತುಮಕೂರು ಗ್ರಾಮಾಂತರದ ಚೋಳಂಬಳ್ಳಿ ಗ್ರಾಮದ ಖಾಸಿನ ಎಂಬ ಮಹಿಳೆಯನ್ನು ತುಮಕೂರಿನ ಪಿಎಚ್ ಕಾಲೋನಿಯ ಅರ್ಬಾಜ್ ಎಂಬತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಇಂದು ಬೆಳಗ್ಗೆ ಮಹಿಳಾ ಸಂಘದಲ್ಲಿ ಪಡೆದಿದ್ದ ಸಾಲ ತೀರಿಸುವ ವಿಷಯಕ್ಕೆ ಜಗಳ ಮಾಡಿಕೊಂಡಿದ್ದ ದಂಪತಿ.

ನನ್ನ ಮಗಳ ಸಾವಿಗೆ ಅವನೇ ಕಾರಣ

ಜಗಳದ ಬಳಿಕ ಗಂಡ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದು ಗಂಡ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಖಾಸಿನಾ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ತಿಳಿದ ಕೂಡಲೇ ಖಾಸಿನಾ ಪೋಷಕರು ಗಂಡನ ಮನೆಗೆ ಧಾವಿಸಿ, ಮಗಳ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗಳ ಸಾವಿಗೆ ಆಕೆಯ ಗಂಡ ಅರ್ಬಾಜ್ ಕಾರಣ ಎಂದು ಅನುಮಾನ ವ್ಯಕ್ತಪಡಿಸಿರುವ ಪೋಷಕರು, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಪತಿ ಅರ್ಬಾಜ್ ಪೊಲೀಸರ ವಶಕ್ಕೆ

ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂಜಯ್ ಕುಮಾರ್ ಕಾಂಬಳೆ, ಪಿಎಸ್ಐ ಚಂದ್ರಕಲಾ, ಎಎಸ್​​ಐ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಘಟನೆ ಸಂಬಂಧ ಅರ್ಬಾಜ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೃತ ಮಹಿಳೆಯ ಶವವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES