Thursday, May 2, 2024

ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟ; ಹಿಂದೂ ಸಂಘಟನೆ ವಿರೋಧ!

ಬೆಂಗಳೂರು: ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಹಸಿರು ಬಾವುಟ ಹಾರಾಟವಾಗಿರುವ ಘಟನೆ ನಡೆದಿದ್ದು, ಹಸಿರು ಬಾವುಟ ಹಾರಾಟದ ವೀಡಿಯೋ ಟ್ವೀಟರ್​ನಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಸಂಘಟನೆಯಿಂದ ವಿರೋಧ ವ್ಯಕ್ತಪಡಿಸಿದ್ದಾರೆ.

ಕೂಡಲೇ ಎಚ್ಚೆತ್ತಿರುವ ಶಿವಾಜಿನಗರ ಪೊಲೀಸರು ಬಾವುಟ ತೆಗಿಸಿ, ರಾಷ್ಟ್ರೀಯ ಬಾವುಟ ಹಾರಿಸಿದ್ದಾರೆ. ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ 6ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಮರಣ ಶಿಕ್ಷೆಗೆ ಆಗ್ರಹ!

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಕಾಸ್ ವಿಕ್ಕಿ ಎಂಬಾತನ ಖಾತೆಯಿಂದ ಟ್ವಿಟ್ ಮಾಡಲಾಗಿದ್ದು, ಆ ಟ್ವೀಟ್​ನಲ್ಲಿ ಬೆಂಗಳೂರು ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಾರುತ್ತಿರುವ ಈ ಧ್ವಜ – ಯಾವ ಧರ್ಮದ್ದು, ಕಾಂಗ್ರೆಸ್ ನಾಯಕರು ಇದಕ್ಕೆ ಉತ್ತರ ಕೊಡಬೇಕು, ಇದನ್ನು ನಿಮ್ಮಗೆ ತೆಗೆಸೋ ತಾಕತ್ ಇಲ್ವಾ, ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೋ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES