Wednesday, January 22, 2025

ಅವ್ರು ಕೇಸರಿ ಬಾವುಟ ಹಾರಿಸಿದ್ದಾಯ್ತು, ಕೇಸರಿ ಬಟ್ಟೆ ಹಾಕಿಕೊಂಡಿದ್ದಾಯ್ತು : ಡಿ.ಕೆ. ಶಿವಕುಮಾರ್

ಬೆಂಗಳೂರು : ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಜೆಡಿಎಸ್ ಬಿಜೆಪಿ ಮೈತ್ರಿ ಹೊಸದೇನು ಅಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಕೇಸರಿ ಬಾವುಟ ಹಾರಿಸಿದ್ದಾಯ್ತು, ಕೇಸರಿ ಬಟ್ಟೆ ಸಹ ಹಾಕಿಕೊಂಡಿದ್ದಾಯ್ತು. ಅವರು ಏನು ಬೇಕಾದರೂ ಹಾಕಿಕೊಂಡು ಹೊಗಲಿ. ಅದರ ಅವಶ್ಯಕತೆ ನಮಗೆ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಹೋರಾಟ ಮಾಡಿಕೊಂಡು ಬರ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಏನು ಬೇಕಾದರೂ ಮಾಡಿಕೊಳ್ಳಲಿ. ನಮಗೆ ನಮ್ಮ ಶಿಕ್ಷಕರು, ಅವರ ಬದುಕಿನ ಬಗ್ಗೆ, ಅವರ ಅಭಿವೃದ್ಧಿ ಬಗ್ಗೆ ಅರಿವು ಇದೆ ಎಂದು ತಿಳಿಸಿದ್ದಾರೆ.

ನಾವು ನಮ್ಮ ಪ್ರಣಾಳಿಕೆಯಲ್ಲಿ ಅನೇಕ ವಿಚಾರದಲ್ಲಿ ಮಾತು ಕೊಟ್ಟಿದ್ದೇವೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಂತ ಭರವಸೆಯನ್ನ ಈಡಿರಿಸುತ್ತೇವೆ. ಅವರ ಎಲ್ಲಾ ಸಮಸ್ಯೆ ಬಗ್ಗೆ ಅರಿವು ಇದೆ. ಆದರೆ, ಎಲೆಕ್ಷನ್ ಸಮಯದಲ್ಲಿ ನಾನು ಮಾತನಾಡೋಕೆ ಹೋಗಲ್ಲ. ಶಿಕ್ಷಕರ ವರ್ಗ ರಾಜ್ಯದಲ್ಲಿ ಬಹಳಷ್ಟು ಸೇವೆ ಮಾಡಿಕೊಂಡು ಬರ್ತಿದೆ. ಬಹಳ ದೊಡ್ಡ ಮಾಡಿಫಿಕೇಶನ್ ಮಾಡಬೇಕು ಅಂತ ಯೋಚನೆಯಲ್ಲಿದ್ದೇವೆ. ಫೌಂಡೇಶನ್ ಹಾಕಿದ್ದೇವೆ, ನಾವೆಲ್ಲ ಈ ಚುನಾವಣೆಯನ್ನ ಎದುರಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES