Tuesday, December 3, 2024

ಚಿಕ್ಕೋಡಿ ಲೋಕಸಭೆ ಟಿಕೆಟ್​ಗೆ ಹಾಲಿ-ಮಾಜಿ ಸಂಸದರ ಕಾದಾಟ

ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ಗೆ ಫೈಟ್ ಜೋರಾಗಿದ್ದು, ಮಾಜಿ ಸಂಸದ ಹಾಗೂ ಹಾಲಿ ಸಂಸದರ ಕಾದಾಟ ಆರಂಭವಾಗಿದೆ.

ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ ನಡುವೆ ಬಿಗ್ ಫೈಟ್ ನಡೆದಿದ್ದು, ಮಾಜಿ ಸಂಸದ ರಮೇಶ ಕತ್ತಿಗೆ ಬಿಜೆಪಿ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರ ಹಾಗೂ ಕತ್ತಿ ಬೆಂಬಲಿಗರ ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಚಿಕ್ಕೋಡಿ ಅಥವಾ ಬೆಳಗಾವಿ ಲೋಕಸಭೆಯಿಂದ ರಮೇಶ ಕತ್ತಿ ಅವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಬಿಜೆಪಿ ಹೈ ಕಮಾಂಡ ಅನ್ನು ಒತ್ತಾಯಿಸಿದ್ದಾರೆ.

BSY ಭರವಸೆ ಭರವಸೆಯಾಗಿಯೇ ಉಳಿದಿದೆ

ಕಳೆದ ಲೋಕಸಭೆ ಚುನಾವಣೆಯಲ್ಲಿ ರಮೇಶ ಕತ್ತಿ ಅವರಿಗೆ ಟಿಕೆಟ್ ಕೈ ತಪ್ಪಿದೆ. ಹೀಗಾಗಿ, ಈ ಬಾರಿ ಟಿಕೆಟ್ ನೀಡಬೇಕು. ರಾಜ್ಯಸಭಾ ಸದಸ್ಯ ಮಾಡುವ ಭರವಸೆಯನ್ನ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಮೇಶ ಕತ್ತಿ ಅವರಿಗೆ ನೀಡಿದ್ದರು. ಯಡಿಯೂರಪ್ಪ ಅವರ ಭರವಸೆ ಭರವಸೆಯಾಗಿ ಉಳಿದಿದೆ. ಕಳೆದ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ರಮೇಶ ಕತ್ತಿ ಕೆಲಸ ಮಾಡುತ್ತಿದ್ದು, ಪಕ್ಷದಲ್ಲಿ ರಮೇಶ ಕತ್ತಿ ಅವರಿಗೆ ಸ್ಥಾನಮಾನ ನೀಡುವಂತೆ ಅವರ ಬೆಂಬಲಿಗರ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES