Monday, December 23, 2024

ಪ್ರೀತಿಸಿದ ಗೆಳತಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಾಗಭೂಷಣ್​​

ಬೆಂಗಳೂರು: ಇತ್ತಿಚೆಗಷ್ಟೆ ಟಗರುಪಲ್ಯದ ಮೂಲಕ ಜನಪ್ರಿಯಗಳಿಸಿದ ನಟ ನಾಗಭೂಷಣ್​ ಇದೀಗ ​ಪ್ರೀತಿಸಿದ ಗೆಳತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು,ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕವೇ ಗಮನ ಸೆಳೆದಿರುವ ನಟ ಅಂದ್ರೆ ಅದು ನಾಗಭೂಷಣ್​. ಕನ್ನಡದಲ್ಲಿ 10ಕ್ಕೂ ಹೆಚ್ಚು ಸಿನಿಮಾದಲ್ಲಿ ಸಹ ಕಲಾವಿದನಾಗಿ ನಟಿಸಿದ್ದ ನಾಗಭೂಷಣ್​ ಟಗರು ಪಲ್ಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಪರಿಚಯವಾಗಿದ್ದರು. ಈ ಸಿನಿಮಾ ಒಳ್ಳೆ ಸಕ್ಸಸ್​ ಕೂಡ ಕೊಟ್ಟಿತ್ತು.

ಪೂಜಾ ಪ್ರಕಾಶ್​ ಯಾರು..? 

ಪೂಜಾ ಪ್ರಕಾಶ್ ಕೂಡ ಕಲಾವಿದೆ ಇವರು ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನಿಂಗ್‌ನಲ್ಲಿ ಪರಿಣಿತಿ ಹೊಂದಿದ್ದಾರೆ. ಇಬ್ಬರಿಗೂ ಕೆಲೆಯ ಬಗ್ಗೆ ಆಸಕ್ತಿಯಿದ್ದು ಹೀಗಾಗಿ ಗೆಳೆಯರಾಗಿದ್ದವರು ಈಗ ಬಾಳಿನ ಪಯಣದಲ್ಲೂ ಸಂಗಾತಿಗಳಾಗಿದ್ದಾರೆ.

ವಾಸುಕಿ ವೈಭವ್​, ಅಮೃತಾ ಅಯ್ಯಂಗಾರ್, ನವೀನ್ ಶಂಕರ್, ನೀನಾಸಂ ಸತೀಶ್ ಸೇರಿಂದತೆ ಅನೇಕ ತಾರೆಯರು ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ.

 

RELATED ARTICLES

Related Articles

TRENDING ARTICLES