Wednesday, January 22, 2025

ಪ್ರಯಾಣಿಕನಿಗೆ ತನ್ನ ಶೂನಿಂದ ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್​

ವಿಜಯಪುರ: ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಯಾಣಿಕನಿಗೆ ಕಂಡಕ್ಟರ್​ ತನ್ನ ಶೂ ನಿಂದ ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಚಿಲ್ಲರೆ ಹಣದ ವಿಚಾರದಲ್ಲಿ ಲೇಡಿ‌ ಕಂಡಕ್ಟರ್ ಗೆ ಪ್ರಯಾಣಿಕ ಅವಾಚ್ಯ ಶಬ್ದ ಬಳಸಿದ್ದಾನೆ. ಇದೇ ವಿಚಾರವಾಗಿ ವಾಗ್ವಾದ ನಡೆದು ಪರಿಸ್ಥಿತಿ ಮಿತಿಮೀರಿ ಲೇಡಿ ಕಂಡಕ್ಟರ್​ ಪ್ರಯಾಣಿಕನಿಗೆ ಬಸ್​ ನಿಲ್ದಾಣದಲ್ಲಿ ನೆರೆದ ಜನರ ಮುಂದೆಯೇ ಬೂಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಲೇಡಿ ಕಂಡಕ್ಟರ್ ಗೆ ಜನ ಸಮಾಧಾನ ಪಡಿಸಿ ಕಳುಹಿಸಿದ್ದಾರೆ.

ಇದನ್ನೂ ಓದಿ: Bigg Boss ಡೋನ್ ಪ್ರತಾಪ್ ಸೋಲು; ಅರ್ಧ ಗಡ್ಡ, ಮೀಸೆ ತೆಗೆದ ಯುವಕ!

ಈ ವೇಳೆ ಲೇಡಿ ಕಂಡಕ್ಟರ್ ಥಳಿಸುತ್ತಿರೋ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಸದ್ಯ ಈ ದೃಶ್ಯದಲ್ಲಿರುವ ಲೇಡಿ ಕಂಡಕ್ಟರ್ ಹಾಗೂ ಪ್ರಯಾಣಿಕನ ಹೆಸರು ತಿಳಿದು ಬಂದಿಲ್ಲಾ.

RELATED ARTICLES

Related Articles

TRENDING ARTICLES