Thursday, November 21, 2024

ಪ್ರಭು ಚೌಹಾಣ್ ವಿಜಯೇಂದ್ರ ಕಾಲಿಗೆ ಬಿದ್ದದ್ದು ಅಕ್ಷಮ್ಯ ಅಪರಾಧ : ಭಗವಂತ ಖೂಬಾ

ಬೀದರ್ : ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚೌಹಾಣ್ ಅವರು ವಿಜಯೇಂದ್ರ ಕಾಲಿಗೆ ಬಿದ್ದು ಹೊಸಬರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟ ವಿಚಾರಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಕಿಡಿಕಾರಿದ್ದಾರೆ.

ಬಿದರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಭು ಚೌಹಾಣ್ ಮಾಡಿರುವ ಘಟನೆ ಅಕ್ಷಮ್ಯ ಅಪರಾಧ. ಈಗಾಗಲೇ ನನ್ನ ವಿರುದ್ಧ 10 ವರ್ಷಗಳಿಂದ ನಿರಂತರವಾಗಿ ಆರೋಪ ಮಾಡುತ್ತಲೇ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನನ್ನ‌ ವಿರುದ್ಧ ಟಿಕೆಟ್‌ಗಾಗಿ ಹಲವರನ್ನ ಎತ್ತಿ ಕಟ್ಟಿದ್ದಾರೆ. ಕಾಂಗ್ರೆಸ್ ಲೀಡರ್‌ಗಳ ಜೊತೆ ಬೆಂಗಳೂರಿನ ಹೋಟೆಲ್‌ಗಳಲ್ಲಿ ಸಭೆ ನಡೆಸಿದ್ದಾರೆ. ಅದೆಲ್ಲವನ್ನೂ ಮುಂದಿನ ದಿನಗಳಲ್ಲಿ ವರಿಷ್ಠರಿಗೆ ತಿಳಿಸುತ್ತೇನೆ. ನನ್ನ ವಿರುದ್ದ ಆರೋಪಗಳಿದ್ರೆ ವರಿಷ್ಠರ ಮುಂದೆ ಹೇಳಬಹುದಿತ್ತು. ಈ ತರಹ ದೊಡ್ಡ ವೇದಿಕೆ ಮೇಲೆ ಈ ರೀತಿ ಮಾಡಿದ್ದು ಸರಿಯಲ್ಲ. ಖಂಡಿತವಾಗಿಯೂ ಇದರಲ್ಲಿ‌ ಕಾಂಗ್ರೆಸ್ ಪಕ್ಷದವರ ಕೈವಾಡವಿದೆ ಎಂದು ಆರೋಪ ಮಾಡಿದ್ದಾರೆ.

ಅವರು ಪಕ್ಷಕ್ಕೆ ದ್ರೋಹ ಮಾಡ್ತಿದ್ದಾರೆ

ನನ್ನ ಮೇಲೆ ಕೊಲೆ ಆರೋಪ ಮಾಡಿದ್ರು. ಆದ್ರೆ, ಇದುವರೆಗೆ ನಾನು ಒಮ್ಮೆಯೂ ಠಾಣೆ ಮೆಟ್ಟಿಲೇರಿಲ್ಲ. 6 ತಿಂಗಳಿಂದ ಸಿಕ್ಕ ಸಿಕ್ಕವರಿಗೆಲ್ಲ, ಟಿಕೆಟ್ ಆಸೆ ಹುಟ್ಟಿಸಿ ಖರ್ಚು ಮಾಡಿಸುತ್ತಿದ್ದಾರೆ. ಪ್ರಭು ಚೌಹಾಣ್ ಅವರು ಪಕ್ಷಕ್ಕೆ ದ್ರೋಹ ಮಾಡ್ತಿದ್ದಾರೆ. ಚೌಹಾಣ್ ಅವರಿಗೆ ಪಕ್ಷದಲ್ಲಿ ಅವರದೇ ಪಾರುಪತ್ಯ ಇರಬೇಕು ಎಂಬ ಆಸೆ ಇದೆ ಎಂದು ತಿರುಗೇಟು ನೀಡಿದ್ದಾರೆ.

ಚೌಹಾಣ್ ಕಾರ್ಯಕರ್ತರನ್ನ ತುಳಿದಿದ್ದಾರೆ

ನಾನು ಯಾವ ಕಾರ್ಯಕರ್ತರನ್ನ ಕಡೆಗಣಿಸಿಲ್ಲ. ಆದ್ರೆ, ಪ್ರಭು ಚೌಹಾಣ್ ಅವರೇ ಕಾರ್ಯಕರ್ತರನ್ನ ತುಳಿದಿದ್ದಾರೆ. ಲಕ್ಷಗಟ್ಟಲೇ ಕಾರ್ಯಕರ್ತರು ಬಿಜೆಪಿ ಪಕ್ಷ ಕಟ್ಟಿದ್ದಾರೆ. ಅವರ ಹಿಂಬಾಲಕರಿಗಷ್ಟೇ ಕಾರ್ಯಕರ್ತರು ಅಂತ ಹೇಳೊದನ್ನ ಚೌಹಾಣ್ ಬಿಡಬೇಕು ಎಂದು ಚೌಹಾಣ್ ವಿರುದ್ದ ಭಗವಂತ ಖೂಬಾ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES