Wednesday, January 22, 2025

ಸಾಲಗಾರರ ಕಾಟಕ್ಕೆ ಹೆದರಿ ಇಡೀ ಫ್ಯಾಮಿಲಿ ಎಸ್ಕೇಪ್

ಮೈಸೂರು : ಸಾಲಗಾರರ ಕಾಟಕ್ಕೆ ಹೆದರಿ ಕುಟುಂಬವೊಂದು ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ತಲೆ ಮರೆಸಿಕೊಳ್ಳುವ ಮೊದಲು ಕುಟುಂಬದ ಯಜಮಾನ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್​ಗೆ ವಾಟ್ಸ್​ಆಪ್ ಮೆಸೇಜ್ ಕಳುಹಿಸಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.

ಮೈಸೂರಿನ ಕೆ.ಜಿ. ಕೊಪ್ಪಲು ಬಡಾವಣೆಯ ಮಹೇಶ್, ಪತ್ನಿ ಭವಾನಿ, ಪುತ್ರಿ ಪ್ರೇಕ್ಷಾ, ಮಹೇಶ್​​ ತಂದೆ ಮಹದೇವಪ್ಪ, ತಾಯಿ ಸುಮಿತ್ರಾ ನಾಪತ್ತೆಯಾದವರು.

ಕಳೆದ 8 ದಿನಗಳಿಂದ ಈ ಕುಟುಂಬ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ವಾಟ್ಸಾಪ್​ಗೆ ಸಂದೇಶ ರವಾನಿಸಿ 8 ದಿನಗಳಿಂದ ನಾಪತ್ತೆಯಾಗಿರುವ ಕುಟುಂಬವನ್ನು ಪತ್ತೆ ಹಚ್ಚುವಂತೆ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಅವಳ ಗಂಡ, ಇವನ ಹೆಂಡತಿ ಪರಾರಿ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಎರಡು ಕುಟುಂಬಗಳು!

ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದ ಮಹೇಶ್​ಗೆ, ವೀರೇಶ್ ಎಂಬುವರು ವ್ಯವಹಾರಕ್ಕೆ ಸಾಥ್ ನೀಡಿದ್ದರು. ಮಹೇಶ್ ಪರಿಚಯ ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದು ಪರಾರಿಯಾಗಿದ್ದರು. ವೀರೇಶ್​ಗೆ ಸಾಲ ನೀಡಿದವರಿಂದ ಮಹೇಶ್ ಮೇಲೆ ಒತ್ತಡ ಹೆಚ್ಚಾಗಿತ್ತು. ಸಾಲಗಾರರ  ಕಾಟ ತಡೆಯಲಾಗದೆ, ಮಹೇಶ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ.

RELATED ARTICLES

Related Articles

TRENDING ARTICLES