ಶಿವಮೊಗ್ಗ : ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಪೊಲೀಸರು ಹನುಮಧ್ವಜ ತೆರವುಗೊಳಿಸಿರುವುದಕ್ಕೆ ಶಾಸಕ ಎಸ್.ಎನ್ ಚನ್ನಬಸಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಅವರು, ಕಾಂಗ್ರೆಸ್ ನಾಯಕರು ಆಂಜನೇಯನ್ನು ಮುಟ್ಟಿದ್ದಾರೆ. ಸಿದ್ದರಾಮಯ್ಯರ ಸರ್ಕಾರ ಬದುಕಿರುತ್ತಾ..? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಕಟ್ಟಿರುವವರು ನಾವು. ಹನುಮ ಹುಟ್ಟಿದ್ದೇ ಕರ್ನಾಟಕದಲ್ಲಿ, ಇದನ್ನು ಈ ಕಾಂಗ್ರೆಸ್ ಸರ್ಕಾರ ಮರೆಯಬಾರದು. ಅವರಪ್ಪನದಾ ಈ ಸರ್ಕಾರ, ನಾವು ಕೇಳಬೇಕಲ್ವಾ..? ಸರ್ಕಾರಿ ಧ್ವಜ ಸ್ತಂಭದಲ್ಲಿ ಹಾಕದೆ ಮತ್ತೆಲ್ಲಿ ಹಾಕಬೇಕು..? ಕೇಸರಿ ಧ್ವಜ ಕಾಣಬಾರದು ಅಲ್ವ ನಿಮಗೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಮ್ಮೆ ಹನುಮಧ್ವಜ ಹಾರಿಸಬೇಕು
ರಾಜ್ಯದಲ್ಲಿ ಬೇರೆ ಧ್ವಜ ಹಾರಿಸಬಹುದಾ..? ಕಾಂಗ್ರೆಸ್ ಪಕ್ಷ ಇದಕ್ಕೆ ಬೆಲೆ ತೆರಬೇಕಾಗುತ್ತೆ. ಹಿಂದೂ ಸಮಾಜ ಈ ಧೋರಣೆಯನ್ನು ಸಹಿಸುವುದಿಲ್ಲ. ಜಂಡಾ ಕಟ್ಟೆಗಳಲ್ಲಿ ಜಂಡಾಗಳು ಇದಾವೇ ಈ ಬಗ್ಗೆಯು ಗಮನ ಹರಿಸಬೇಕಾಗುತ್ತೆ. ಮತ್ತೊಮ್ಮೆ ಹನುಮನ ಧ್ವಜವನ್ನು ಅದೇ ಸ್ಥಳದಲ್ಲಿ ಹಾರಿಸಬೇಕು ಎಂದು ಶಾಸಕ ಚನ್ನಬಸಪ್ಪ ಆಗ್ರಹಿಸಿದ್ದಾರೆ.