Sunday, December 22, 2024

ಬಿಗ್​ ಬಾಸ್ ʻವಿಟಿʼಯಲ್ಲಿ ಎಲ್ಲೂ ಕಾಣಿಸಿಲ್ಲ ರಕ್ಷಕ್‌ ಬುಲೆಟ್

ಬೆಂಗಳೂರು: ʻಬಿಗ್‌ ಬಾಸ್‌ ಸೀಸನ್‌ 10ʼರ ವಿನ್ನರ್‌ ಹಾಗೂ ರನ್ನರ್‌ಅಪ್‌ ಘೋಷಣೆ ಆಗಿದ್ದಾಗಿದೆ. ಇದೀಗ ಮತ್ತೆ ಚರ್ಚೆಯಲ್ಲಿರುವುದು ಸೀಸನ್‌ 10ರ ಸ್ಪರ್ಧಿಗಳಾದ ಇಶಾನಿ ಹಾಗೂ ರಕ್ಷಕ್‌.

ಹೌದು, ಪ್ರತಿ ಬಿಗ್‌ ಬಾಸ್‌ ಸೀಸನ್‌ ಫಿನಾಲೆಯಲ್ಲಿ ಕೊನೆಯ ಗಳಿಗೆಯಲ್ಲಿ ಸ್ಪರ್ಧಿಗಳು ಒಟ್ಟೂ ಜರ್ನಿಯನ್ನು ಪ್ಲೇ ಮಾಡಲಾಗುತ್ತದೆ. ಈ ಬಾರಿ ಸ್ಪರ್ಧಿಗಳ ಒಟ್ಟಾರೆ ಜರ್ನಿ ವಿಟಿಯನ್ನು ಹಾಕಲಾಗಿದೆ. ಇದರಲ್ಲಿ ಎಲ್ಲಿಯೂ ರಕ್ಷಕ್ ಹಾಗೂ ಇಶಾನಿಯನ್ನು ತೋರಿಸಿಲ್ಲ. ರಕ್ಷಕ್ ಹಾಗೂ ಈಶಾನಿ ಮಾಡಿಕೊಂಡ ಕಿರಿಕ್​ನಿಂದಲೇ ಈ ರೀತಿ ಆಗಿದೆ. ಇವರಿಬ್ಬರು ಮಾಡಿದ ಕಿರಿಕ್‌ಗೆ ಸರಿಯಾಯ್ತು ಎಂದು ವೀಕ್ಷಕರು ಕೂಡ ಕಮೆಂಟ್‌ ಮಾಡಿದ್ದಾರೆ.

ಸಂದರ್ಶನದಲ್ಲಿ ಕಿಚ್ಚ ಸುದೀಪ್‌ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು, ಇದಾದ ಮೇಲೆ ಸುದೀಪ್‌ ಅವರು ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು. ಇದರ ಪರಿಣಾಮವೋ ಏನೊ ವಿಡಿಯೋ ಟೇಪ್​ನಲ್ಲೂ (ವಿಟಿ) ಎಲ್ಲಿಯೂ ರಕ್ಷಕ್‌ ಕಾಣಿಸಿಲ್ಲ. ಇದೀಗ ಇವರು ಕಿರಿಕ್‌ ಮಾಡಿಕೊಂಡಿದ್ದಕ್ಕಾಗಿ ಬಿಗ್‌ ಬಾಸ್‌ ಕೈ ಬಿಟ್ಟಿದ್ದಾರೆ ಎಂಬ ಮಾತುಗಳು ಚರ್ಚೆಯಾಗುತ್ತಿದೆ.

ಪರೋಕ್ಷವಾಗಿ ರಕ್ಷಕ್‌ಗೆ ತಿರುಗೇಟು ಕೊಟ್ಟಿದ್ದ ಸುದೀಪ್‌!

ರಕ್ಷಕ್‌ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದು ಕಿಚ್ಚ ಸುದೀಪ್‌ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಸಂದರ್ಶನಗಳಲ್ಲಿ ‘ಬಿಗ್ ಬಾಸ್’ ವಿರುದ್ಧ ಮಾತನಾಡಿದ್ದರು ರಕ್ಷಕ್‌. ಸುದೀಪ್ ಅವರು ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ, ರಕ್ಷಕ್‌ಗೆ ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು. ಮತ್ತೆ ಫಿನಾಲೆಯಲ್ಲಿ ಸುದೀಪ್‌ ಸರಿಯಾಗಿ ರಕ್ಷಕ್‌ ಅವರನ್ನು ಬೆಂಡೆತ್ತಿದ್ದರು. ʻನಮ್ಮನ್ನ ಹಾಗೆ ತೋರಿಸಿದ್ರು, ಹೀಗೆ ತೋರಿಸಿದ್ರು, ನೆಗೆಟಿವ್ ಆಗಿ ತೋರಿಸಿದ್ರು ಅಂತೆಲ್ಲಾ ಹೇಳ್ತೀರಿ. ಯಾವ ಪುಟಗೋಸಿ ಬದನೆಕಾಯಿ ಇಲ್ಲ. ತಾವೇನು ಮಾಡಿದ್ದೀರೋ ಅದನ್ನ ಮಾತ್ರ ತೋರಿಸೋಕೆ ಸಾಧ್ಯ. ಇದನ್ನು ನೀವು ಹೊರಗಡೆ ಬಂದು ಸಂದರ್ಶನ ಕೊಡುವಾಗಲೂ ತಲೆಯಲ್ಲಿ ಇಟ್ಟುಕೊಳ್ಳಬೇಕುʼʼಎಂದು ಪರೋಕ್ಷವಾಗಿ ರಕ್ಷಕ್‌ಗೆ ತಿರುಗೇಟು ಕೊಟ್ಟಿದ್ದರು ಸುದೀಪ್‌.

ಇಶಾನಿ ಕೂಡ ಮನೆಗೆ ಬಂದಾಗ ಡ್ರೋನ್ ಪ್ರತಾಪ್‌ ಮಾತನಾಡುತ್ತಿದ್ದಾಗ, ‘’ಕಾಗೆ ಕಾ.. ಕಾ.. ಅಂತಿದೆ’’ ಎಂದು ಚುಚ್ಚು ಮಾತನ್ನಾಡಿದ್ದರು. ಕಿಚ್ಚ ಸುದೀಪ್‌ ಈ ಬಗ್ಗೆಯೂ ಮಾತನಾಡಿ ʻʻಕಾಗೆ ಕಕ್ಕಾ ಮಾಡಿಕೊಂಡು ಸಿಂಪಂಥಿಯಲ್ಲಿ ಗೆದ್ದುಕೊಂಡು ಬಂದಿದೆ. ವಾವ್‌ ಇಶಾನಿ!ಯಾವ ಆ್ಯಂಗಲ್‌ನಲ್ಲಿ ನೀವು ಸೋತು ಹೊರಗಡೆ ಹೋಗಿ ಕಲಿತು ಒಳಗಡೆ ಬಂದ್ರಿ ಎಂದು ಅನ್ನಿಸುತ್ತೇ ಹೇಳಿʼʼಎಂದುತಿರುಗೇಟು ಕೊಟ್ಟಿದ್ದರು.

 

RELATED ARTICLES

Related Articles

TRENDING ARTICLES