Wednesday, January 22, 2025

ಅವರೊಬ್ಬ ವಿಧವೆ, ಬುಡಕಟ್ಟು ಸಮಾಜದವರು : ಸಚಿವ ಸಂತೋಷ್ ಲಾಡ್

ಧಾರವಾಡ : ಸಿಎಂ ಸಿದ್ದರಾಮಯ್ಯ ಅವರು ಬಾಯಿತಪ್ಪಿ ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಏಕವಚನ ಬಳಕೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹೇಳಿದ ಮಾತು ಅದಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಏಕವಚನ ಬಳಕೆ ಹಿಂದೆ ಸಿದ್ದರಾಮಯ್ಯನವರು ಹೇಳಿದ ವಿಷಯವನ್ನೂ ನೋಡಬೇಕಲ್ವಾ? ಮಹತ್ವದ ವಿಷಯ ಹೇಳಿದ್ರಲ್ವಾ ಅವರು ಎಂದು ತಿಳಿಸಿದರು.

ಅವರೊಬ್ಬರ ವಿಧವೆ ಹೆಣ್ಣು ಮಗಳು, ಬುಡಕಟ್ಟು ಸಮಾಜದವರು. ಅದೇ ಕಾರಣಕ್ಕೆ ಅವರನ್ನು ಸಂಸತ್ ಉದ್ಘಾಟನೆಗೆ ಕರೆದಿಲ್ಲ. ಪ್ರಧಾನಿ ಮೋದಿ ಬಾಲರಾಮನ ಪ್ರಾಣ ಪ್ರತಿಷ್ಠಾ ಪೂಜೆ ಮಾಡಿದ್ದು ತಪ್ಪು. ಹಿಂದೂ ಸಂಸ್ಕೃತಿ ಪ್ರಕಾರ ಬ್ರಾಹ್ಮಣರೇ ಪೂಜೆ ಮಾಡಬೇಕು. ಇದರ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.

ಮೋದಿ ಮಾಡಿದ್ದು ಸರಿಯೋ? ತಪ್ಪೋ?

ಪ್ರಧಾನಿ ಮೋದಿ ಪೂಜೆ ಮಾಡಿರುವುದು ಉಲ್ಲಂಘನೆಯಾಗಿದೆ. ಹಿಂದೂ ಸಂಸ್ಕೃತಿ ಪ್ರಕಾರ ಬ್ರಾಹ್ಮಣರೇ ಪೂಜೆ ಮಾಡಬೇಕಲ್ವಾ? ಪ್ರಾಣ ಪ್ರತಿಷ್ಠಾಪನೆ ಬ್ರಾಹ್ಮಣರೇ ಮಾಡಬೇಕಂತ ನಾವು ಕೇಳಿದ್ದೇವೆ. ಆದರೆ, ಮೋದಿ ಸಾಹೇಬರು ಪೂಜೆ ಮಾಡಿದರಲ್ವಾ? ಇದನ್ನು ಎಲ್ಲ ಸ್ವಾಮೀಜಿಗಳನ್ನು ಕರೆಯಿಸಿ ಚರ್ಚೆ ಮಾಡಬೇಕು. ಪ್ರಧಾನಿ ಮೋದಿಯವರು ಮಾಡಿದ್ದು ಸರಿಯೋ? ತಪ್ಪೋ? ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

RELATED ARTICLES

Related Articles

TRENDING ARTICLES