Saturday, January 18, 2025

ಕಾಂಗ್ರೆಸ್​ಗೆ ಭೂತ, ಪ್ರೇತ, ಟಿಪ್ಪು ದೆವ್ವ ಮೆಟ್ಟಿಕೊಂಡಿದೆ : ಸಿ.ಟಿ. ರವಿ

ಮಂಡ್ಯ : ಕಾಂಗ್ರೆಸ್​ಗೆ ಭೂತ, ಪ್ರೇತ ಮೆಟ್ಟಿಕೊಂಡಿದೆ. ಟಿಪ್ಪು ಸುಲ್ತಾನ್ ದೆವ್ವ ಮೆಟ್ಟಿಕೊಂಡಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.

ಮಂಡ್ಯದ ಡಿಸಿ ಕಚೇರಿ ಬಳಿ ಮಾತನಾಡಿದ ಅವರು, ಹನುಮಧ್ವಜ ತೆಗೆದ ಈ ಸರ್ಕಾರ ರಾಜಕೀಯವಾಗಿ ಭಸ್ಮವಾಗಬೇಕು. ನಮ್ಮ ಹೋರಾಟ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧ ನೀತಿ ವಿರುದ್ಧ. ಹನುಮನನ್ನ ಕೆಣಕಿ ಯಾರಾದ್ರು ಉಳಿದಿದ್ದಾರಾ..? ಕಾಂಗ್ರೆಸ್ ಕೂಡ ಜಾಸ್ತಿ ದಿನ ಉಳಿಯಲ್ಲ ಎಂದು ಕಿಡಿಕಾರಿದ್ದಾರೆ.

ಹನುಮ ಜನಿಸಿದ ನಾಡು ಕರ್ನಾಟಕ, ಈ ನಾಡಲ್ಲಿ ಹನುಮಧ್ವಜ ಹಾಕೋದು ಅಪರಾಧನಾ..? ಕಾಂಗ್ರೆಸ್ ಅಪರಾಧ ಅಂತ ಭಾವಿಸಿದೆ. ನಾವು ಊರು ಊರಿನಲ್ಲಿ, ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸುತ್ತೇವೆ. ನಿಮಗೆ ತಾಕತ್ ಇದ್ರೆ ತೆಗೆದು ನೋಡಿ. ನೀವು ಉಳಿಯುತ್ತಿರೋ? ಹನುಮ ಭಕ್ತರು ಉಳಿಯುತ್ತಾರೋ ನೊಡೋಣ ಎಂದು ಸವಾಲ್ ಹಾಕಿದ್ದಾರೆ.

ರಾಮನ ವಿರೋಧಿ ಎಂದು ಸಾಬೀತುಪಡಿಸಿದ್ದೀರಿ

ಶಾಂತಿ ಸಂಧಾನಕ್ಕೆ ರಾಮ ಹೋಗಿದ್ದ ಹನುಮನ ಬಾಲಕ್ಕೆ ಬೆಂಕಿ ಹಾಕಿದ್ರು. ನಿಮ್ಮ ಹೆಸರಲ್ಲಿ ರಾಮ ಇರಬಹುದು, ಸಿದ್ದರಾಮಯ್ಯ ಅವರೇ ರಾಮ ಭಕ್ತಿ ಇಲ್ಲ. ರಾಮನ ವಿರೋಧಿ ಎಂದು ಸಾಬೀತುಪಡಿಸಿದ್ದೀರಿ. ಕಾಂಗ್ರೆಸ್​ಗೆ ಭೂತ, ಪ್ರೇತ ಮೆಟ್ಟಿಕೊಂಡಿದೆ. ಟಿಪ್ಪು ಸುಲ್ತಾನ್ ದೆವ್ವ ಮೆಟ್ಟಿಕೊಂಡಿದೆ ಎಂದು ಕುಡುಕಿದ್ದಾರೆ.

ಊರಿಗೆ ಕಾಲಿಡಲು ಆಗದ ಪರಿಸ್ಥಿತಿ ಬರುತ್ತೆ

ಲೋಕಸಭಾ ಚುನಾವಣೆಯಲ್ಲಿ 28 ಸೀಟು ಗೆಲ್ಲುತ್ತೆ. ನೀವು ತಪ್ಪು ಮಾಡಿದ್ದಿರಿ, ಆ ತಪ್ಪಿಗೆ ಸಾರ್ವಜನಿಕರ ಕ್ಷಮೆಯಾಚನೆ ಮಾಡಿ. ಕೆರಗೋಡು ಗ್ರಾಮದಲ್ಲಿ ಮತ್ತೆ ಹನುಮ ಧ್ವಜ ಹಾರಾಡಬೇಕು. ಈ ಊರಿಗೆ ಕಾಲಿಡಲು ಆಗದ ಪರಿಸ್ಥಿತಿ ಬರುತ್ತೆ. ರಾಜಕೀಯ ಎಷ್ಟು ದಿನ ಮಾಡ್ತಿರಾ ನೀವು..? ಕಾಂಗ್ರೆಸ್ ಖೇಲ್ ಖತಂ ಹಾಗುತ್ತೆ. ಜಿಲ್ಲಾಡಳಿತ ಮತ್ತೆ ಹನುಮ ಧ್ವಜ ಹಾಕಿ ಎಂದು ಸಿ.ಟಿ. ರವಿ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES